Showing posts with label ಮಂದರೋದ್ಧರಾ ಬಂದು ಕಣ್ಣಮುಂದೆ ನಿಲ್ಲೋ uragadrivasa vittala. Show all posts
Showing posts with label ಮಂದರೋದ್ಧರಾ ಬಂದು ಕಣ್ಣಮುಂದೆ ನಿಲ್ಲೋ uragadrivasa vittala. Show all posts

Monday, 2 August 2021

ಮಂದರೋದ್ಧರಾ ಬಂದು ಕಣ್ಣಮುಂದೆ ನಿಲ್ಲೋ ankita uragadrivasa vittala

ಮಂದರೋದ್ಧರಾ-ಬಂದು ಕಣ್ಣಮುಂದೆ ನಿಲ್ಲೋ ಪ


ಬಡವರೊಡೆಯನೆಂದು ನಿನ್ನ ಅಡಿಯ ಬಿಡದೆ

ನಂಬಿದೆನೋ ಕಡುದಯಾನಿಧೆ ಬಡಕುಚೇಲನ

ಪಿಡಿಯವಲಿಗೆ ಒಲಿದು ಪೊರೆದೆ1


ಸರ್ವಸಾರಭೋಕ್ತ ನೀನೆ ತೋರ್ವುದಿಲ್ಲ

ಕೊಡಲು ನಿನಗೆ ಸರ್ವದೇವಸಾರ್ವಭೌಮನೀ

ನೋರ್ವ ವ್ಯಾಪ್ತನಿರ್ಲಿಪ್ತ 2


ಪ್ರಣತಕಾಮದನೆಂದು ಅಂದು ಅಣುಗಧೃವನಾಕ್ಷಣದಿ

ಪೊರೆದೆ ಪ್ರಣತಾಥಿರ್üಹರನೆಂದು ನಂಬಿದೆ

ದಣಿಸಲಾಗದೋ ದೀನರಕ್ಷಕ 3


ಮುಕುತರೊಡೆಯ ಭಕುತವತ್ಸಲ ಯುಕುತಿತೋರದೊ

ನಿನ್ನ ಧ್ಯಾನಕೇ ಶಕುತಿಯಿತ್ತು ಸಲಹೊ ಎನ್ನನು

ಸಕಲಲೋಕೋದ್ಧ್ದಾರ ಧೀರ 4


ಎಲ್ಲಜನರ ಪೊರೆಯಲು ಶ್ರೀನಲ್ಲ ನಿಂತೆಯೊ ಶೇಷಶೈಲದಿ

ವಲ್ಲಭಾ ಶ್ರೀ ವೆಂಕಟೇಶ ನೀ-

ನೆಲ್ಲಬಲ್ಲೆನ್ನ ಸೊಲ್ಲ ಲಾಲಿಸೊ 5

****