Showing posts with label ವಾಸುದೇವನ ಪುರ ಪ್ರವೇಶಿಸಿದರು varadendra vittala shreeshpranesha dasa stutih. Show all posts
Showing posts with label ವಾಸುದೇವನ ಪುರ ಪ್ರವೇಶಿಸಿದರು varadendra vittala shreeshpranesha dasa stutih. Show all posts

Sunday, 1 August 2021

ವಾಸುದೇವನ ಪುರ ಪ್ರವೇಶಿಸಿದರು ankita varadendra vittala shreeshpranesha dasa stutih

 ..

ವರದೇಂದ್ರವಿಠಲರ ಹಾಡು

ನಿರ್ಯಾಣ ಸ್ತೋತ್ರ


ವಾಸುದೇವನ ಪುರ ಪ್ರವೇಶಿಸಿದರು |ಈಶ ಭಜಕ ಶ್ರೀಶ ಪ್ರಾಣೇಶದಾಸಾರ್ಯ ಪ


ಉತ್ತಂಕ ಋಷಿಯಂತೆ ಉತ್ತಮ ಗುರುಪಾದ |ಅತ್ಯಂತ ಭಕ್ತಿಯಿಂ ಸ್ತುತಿಸಿ ಯಜಿಸಿ ||ಉತ್ತಮ ಶ್ಲೋಕ ಶ್ರೀ ಪುರುಷೋತ್ತಮನ ಗುಣವ |ನೃತ್ಯ ಗೀತದಿ ಪಾಡಿ ಮೃತ್ಯಲೋಕವ ತ್ಯಜಿಸಿ 1


ವಾಸ ವಾಸರದಲಿ ವಾಸುದೇವನ ಕಥೆಯ |ಭೂಸೂರರಿಗೆ ಪೇಳಿ ತೋಷದಿಂದ ||ವಾಸವಾದ್ಯಮರ ವಂದಿತನ ಪಾದದಿ ಭಕ್ತಿ |ಲೇಸಾಗಿ ತೋರಿ ಭವಕ್ಲೇಶವನು ಪರಿಹರಿಸಿ 2


ಅಬ್ಧನಂದನ ಭಾದ್ರಪದ ತಿಥಿ ಅಷ್ಟಮಿಯ |ಶುದ್ಧ ಭೌಮ್ಯವಾಸರದ ಉಷಃಕಾಲದಿ ||ಮುದ್ದು ಪ್ರಲ್ಹಾದನ್ನ ಪೊರೆದ ನರಹರಿರೂಪ |ಹೃದ್ಗುಹಾದಲಿ ನೋಡಿ ಹರುಷವನು ಬಡುತಲಿ 3


ದಾಸ ಕುಲ ಶ್ರೇಷ್ಠ ಗುರು ಪ್ರಾಣೇಶದಾಸರಿಂ |ಶ್ರೀಶ ಪ್ರಾಣೇಶ ವಿಠಲೆಂಬಂಕಿತಾ ||ಸೋಸಿನಿಂದಲಿ ಪಡೆದು ಶ್ರೀಶ ಮಹಿಮೆ ಉ- |ಲ್ಲಾಸದಿಂದಲಿ ಭಜಿಸಿ ಬೇಸರವನಳಿಯುತಾ 4


ಮರುತನೆ ಪರಮ ಗುರು, ಹರಿಯೆ ಪರದೇವತೆ |ಪುರಂದರರೆ ದಾಸರೆಂದರುಹಿ ಧರೆಗೆ ||ವರದೇಂದ್ರ ವಿಠಲನ ಚರಣವನು ಪೂಜಿಸಿ |ದರಣಿ ಸಾಧನವನ್ನು ತ್ವರಿತದಿಂದಲಿ ಮುಗಿಸಿ 5

***