Showing posts with label ಳಳ- RSS- ವಾದಗಳ ಸೆರೆ ಬಿಡಿಸಿ VAADAGALA SERE BIDISI rss. Show all posts
Showing posts with label ಳಳ- RSS- ವಾದಗಳ ಸೆರೆ ಬಿಡಿಸಿ VAADAGALA SERE BIDISI rss. Show all posts

Friday, 24 December 2021

ವಾದಗಳ ಸೆರೆ ಬಿಡಿಸಿ others VAADAGALA SERE BIDISI rss



RSS song  


ವಾದಗಳ ಸೆರೆ ಬಿಡಿಸಿ, ಭೇಧಗಳ ತೆರೆ ಸರಿಸಿ

ತೆರೆದುಬಿಡು ಹೃದಯದ್ವಾರ, ಬರಲಿ ಬಿಡು ಕದಿರ ನೇರ ||ಪ||


ಹಳ್ಳಿಹಳ್ಳಿಯ ಬದಿಯ, ಹಳ್ಳಕೊಳ್ಳವೆ ಯಮುನೆ

ಜೀವನದಿಯಾದಾಳು, ಭಾವಜಲವೆರೆದಾಗ

ದನಗಾಹಿ ಬಾಲಕರು, ರಾಷ್ಟ್ರರಥ ಚಾಲಕರು

ಆದಾರು ಬೆಳೆದಾರು ಧ್ಯೇಯಜಲವೆರೆದಾಗ ||೧||


ತರುಣಗಣ ತಲೆ ಎತ್ತಿ ನಿಂತಾಗ ತೋಳೆತ್ತಿ

ಬೆಟ್ಟಬೆಟ್ಟವನೆತ್ತಿ ಸಹ್ಯಾದ್ರಿ ಮೈ ಎತ್ತಿ

ಇರುಳಕೋಟೆಯು ಕರಗಿ ಮೂಡುವನು ವಿಜಯರವಿ

ಹಾಡುವನು ಜಯಗಾನ ಚಿರವಿಹಾರಿ ಸಮೀರ ||೨||


ಮೈಮರೆತ ಮಾನವರ ಮಣ್ಣುಗೊಂಬೆಯ ಹಿಡಿದು

ನಾಡಿನಾಡಿಯ ಮಿಡಿದು ಜೀವರಾಗವ ತುಡಿದು

ಅಸುರಬಲ ಸದೆಬಡಿದು, ಶುಭ ನವೋದಯ ಗಳಿಸೆ

ಶಾಲಿವಾಹನರೆಲ್ಲ ನಿಲಬೇಕು ಸಾಕಾರ ||೩||

***

vAdagaLa sere biDisi, BEdhagaLa tere sarisi

teredubiDu hRudayadvAra, barali biDu kadira nEra ||pa||


haLLihaLLiya badiya, haLLakoLLave yamune

jIvanadiyAdaaLu, BAvajalaveredAga

danagAhi bAlakaru, rAShTraratha cAlakaru

AdAru beLedAru dhyEyajalaveredAga ||1||


taruNagaNa tale etti niMtAga tOLetti

beTTabeTTavanetti sahyAdri mai etti

iruLakOTeyu karagi mUDuvanu vijayaravi

hADuvanu jayagAna ciravihAri samIra ||2||


maimareta mAnavara maNNugoMbeya hiDidu

nADinADiya miDidu jIvaraagava tuDidu

asurabala sadebaDidu, SuBa navOdaya gaLise

SAlivAhanarella nilabEku sAkAra ||3||

***
ವಾದಗಳ ಸೆರೆ ಬಿಡಿಸಿ, ಭೇದಗಳ ತೆರೆ ಸರಿಸಿ

ತೆರೆದುಬಿಡು ಹೃದಯದ್ವಾರ, ಬರಲಿ ಬಿಡು ಕದಿರ ನೇರ ||ಪ||


ಹಳ್ಳಿಹಳ್ಳಿಯ ಬದಿಯ, ಹಳ್ಳಕೊಳ್ಳವೆ ಯಮುನೆ

ಜೀವನದಿಯಾದಳು, ಭಾವಜಲವೆರೆದಾಗ

ದನಗಾಹಿ ಬಾಲಕರು, ರಾಷ್ಟ್ರರಥ ಚಾಲಕರು

ಆದರು ಬೆಳೆದಾರು ಧ್ಯೇಯಜಲವೆರೆದರು ||೧||


ತರುಣಗಣ ತಲೆ ಎತ್ತಿ ನಿಂತಾಗ ತೋಳೆತ್ತಿ

ಬೆಟ್ಟಬೆಟ್ಟವನೆತ್ತಿ ಸಹ್ಯಾದ್ರಿ ಮೈ ಎತ್ತಿ

ಇರುಳಕೋಟೆಯು ಕರಗಿ ಮೂಡುವನು ವಿಜಯರವಿ

ಹಾಡುವನು ಜಯಗಾನ ಚಿರವಿಹಾರಿ ಸಮೀರ ||೨||


ಮೈಮರೆತ ಮಾನವರ ಮಣ್ಣುಗೊಂಬೆಯ ಹಿಡಿದು

ನಾಡಿನಾಡಿಯ ಮಿಡಿದು ಜೀವರಾಗವ ತುಡಿದು

ಅಸುರಬಲ ಸದೆಬಡಿದು, ಶುಭ ನವೋದಯ ಗಳಿಸೆ

ಶಾಲಿವಾಹನರೆಲ್ಲ ನಿಲ್ಲಬೇಕು ಸಾಕಾರ ||೩||

***