Showing posts with label ನಿನ್ನ ಭಕುತಿಯನು ಬೀರೊ ದೇವ ಎನ್ನಮನ್ನಿಸಿ purandara vittala NINNA BHAKUTIYANU BEERO DEVA ENNA MANNISI. Show all posts
Showing posts with label ನಿನ್ನ ಭಕುತಿಯನು ಬೀರೊ ದೇವ ಎನ್ನಮನ್ನಿಸಿ purandara vittala NINNA BHAKUTIYANU BEERO DEVA ENNA MANNISI. Show all posts

Sunday, 5 December 2021

ನಿನ್ನ ಭಕುತಿಯನು ಬೀರೊ ದೇವ ಎನ್ನಮನ್ನಿಸಿ purandara vittala NINNA BHAKUTIYANU BEERO DEVA ENNA MANNISI

Audio by Sri. Madhava Rao

ರಾಗ ಶಂಕರಾಭರಣ. ತ್ರಿಪುಟ ತಾಳ 

ನಿನ್ನ ಭಕುತಿಯೆನು ಬೀರೋ, ದೇವ
ಎನ್ನ ಮನ್ನಿಸಿ ಸಲಹುವರಾರೋ ||ಪ||

ಸನ್ನುತ ಸನ್ಮಾರ್ಗ ತೋರೋ, ಪ್ರ-
ಸನ್ನ ರಕ್ಷಕ ಬೇಗ ಬಾರೋ ||ಅ.ಪ||

ಪನ್ನಗಶಯನ ಲಕ್ಷ್ಮೀಶ, ವೇದ-
ಸನ್ನುತಪಾದ ಸರ್ವೇಶ
ಇನ್ನು ಬಿಡಿಸೊ ಮೋಹಪಾಶ ಆ-
ಪನ್ನ ರಕ್ಷಕ ಶ್ರೀನಿವಾಸ ||

ನಾರದ ಗಾನವಿಲೋಲ, ಸ್ವಾಮಿ
ಭೂರಿ ಭಕ್ತರ ಪರಿಪಾಲ
ಭೂರಮಣ ಕರುಣಾಲವಾಲ
ನೀರದಶ್ಯಾಮ ಗೋಪಾಲ ||

ಕರಿರಾಜ ವರದ-ಪ್ರಮೇಯ , ಎನ್ನ
ಅರಿತು ಪಾಲಿಸೊ ಯೋಗಿಧ್ಯೇಯ
ಸುರಮುನಿ ಹೃದಯನಿಕಾಯ, ಗುರು
ಪುರಂದರವಿಠಲರೇಯ ||
***

pallavi

ninna bhakutiyenu bIrO dEva enna mannisi salahuvarArO

anupallavi

sannuta sanmArga tOrO prasanna rakSaka bEga bArO

caraNam 1

pannaga shayana lakSmIsha vEda sannutapAda sarvEsha
innu biDiso mOhapAsha A panna rakSaka shrInivAsa

caraNam 2

nArada gAnavilOla svAmi bhUri bhaktara paripAla
bhUramaNa karuNAlavAla nava nIrada shyAma gOpAla

caraNam 3

karirAja varadaA pramEya enna aridu pAlisu yOgidhyEya
suramuni hrdayanikAya guru purandara viTTalarEya
***

ನಿನ್ನ ಭಕುತಿಯನು ಬೀರೊ ಎನ್ನ
ಮನ್ನಿಸಿ ಸಲಹುವರಾರೋ..... ಪ

ಸನ್ನುತ ಸನ್ಮಾರ್ಗ ತೋರೋ ಆ

ಪನ್ನರಕ್ಷಕ ಬೇಗ ಬಾರೋ.... ಅ.ಪ

ಪನ್ನಗಶಯನ ಲಕ್ಷ್ಮೀಶಾ ವೇದ

ಸನ್ನುತ ಪಾದ ಸರ್ವೇಶಾ
ಇನ್ನು ಬಿಡಿಸು ಭವಪಾಶಾ ಪ್ರ
ಸನ್ನ ರಕ್ಷಿಸೊ ಶ್ರೀನಿವಾಸಾ.... 1

ನಾರದ ಗಾನವಿಲೋಲಾ ಸ್ವಾಮಿ

ಭೂರಿ ಭಕ್ತರ ಪರಿಪಾಲಾ
ಶ್ರೀ ರಮಣ ಕರುಣಾಲವಾಲ - ದೇವ
ನೀರದ ಶ್ಯಾಮ ಗೋಪಾಲಾ.....2

ಕರಿರಾಜವರದ ಪ್ರಮೇಯಾ ಎನ್ನ

ನರಿತು ನಡೆಸೊ ಯೋಗಿಧ್ಯೇಯ 
ಸುರಮುನಿ ಹೃದಯ ನಿಕಾಯ -ನಮ್ಮ
ಪುರಂದರ ವಿಠಲರಾಯಾ...... 3
********

ನಿನ್ನ ಭಕುತಿಯನು ಬೀರೊ ಎನ್ನಮನ್ನಿಸಿ ಸಲಹುವರಾರೋ ಪ

ಸನ್ನುತಸನ್ಮಾರ್ಗ ತೋರೋ ಆಪನ್ನರಕ್ಷಕ ಬೇಗ ಬಾರೋ ಅ.ಪ

ಪನ್ನಗಶಯನ ಲಕ್ಷ್ಮೀಶಾ ವೇದಸನ್ನುತಪಾದಸರ್ವೇಶಾಇನ್ನು ಬಿಡಿಸು ಭವಪಾಶಾ ಪ್ರಸನ್ನ ರಕ್ಷಿಸೊ ಶ್ರೀನಿವಾಸಾ 1

ನಾರದ ಗಾನವಿಲೋಲಾ ಸ್ವಾಮಿಭೂರಿಭಕ್ತರ ಪರಿಪಾಲಾಶ್ರೀ ರಮಣಕರುಣಾಲವಾಲ- ದೇವನೀರದಶ್ಯಾಮ ಗೋಪಾಲಾ2

ಕರಿರಾಜವರದ ಪ್ರಮೇಯಾ ಎನ್ನನರಿತು ನಡೆಸೊ ಯೋಗಿಧ್ಯೇಯ ||ಸುರಮುನಿ ಹೃದಯನಿಕಾಯ-ನಮ್ಮಪುರಂದರವಿಠಲರಾಯಾ3
**********