ವ್ಯಾಸ ತತ್ವಜ್ಞರ ಚರಿಯಾ ಮನಕಾಶ್ಚರಿಯಾ
ಪರಮಹಂಸ ಕುಲಜ ಭುವನೇಂಧ್ರರ ತನಯಾ ಪ
ಶೇಷಗಿರೀಶ್ವರ ಕೃಪಯಾ ಐಜಿ ವ್ಯಾಸವೆಂಕಟ ನರ-
ಸಿಂಹಾಭಿಧೇಯ ಭೂಸುರೋತ್ತಮರಿಗೆ ತನಯಾ ನೆನಿಸಿ
ಭಾಸುರ ಕೀರ್ತಿಯ ಪಡೆದ ರಾಮಾರ್ಯ 1
ವೇಣಿ ಸೋಮಪುರ ನಿಲಯ ಪಾಹಿ
ಆನತ ಜನಸುರಧೇನೋ ಮಾಂಕೃಪಯಾ
ವೇಣು ಗೋಪಾಲನ ಪ್ರೀಯ ಎಂದು
ಧ್ಯಾನಿಪ ಜನರಘ ತಿಮಿರಕೆ ಸೂರ್ಯ 2
ಕೇಳಿವರ ಮಹಿಮೆ ಅಪಾರ ಗದ್
ವಾಲ ಭೂಪಗೆ ಬಂದ ಭಯ ಪರಿಹಾರ
ಪೇಳಲು ಶ್ಲೋಕಾರ್ಥಸಾರ ಕೃಷ್ಣಾ
ಮೇಲೆ ಪ್ರವಹಿಸಲು ಓಡಿತು ಶತೃನಿಕರ 3
ರಾಮ ಪದಾಂಬುಜ ಭೃಂಗ ತನ್ನ
ನೇಮದಿಂದಲಿ ಶೇವಿಪರ ಭವಭಂಗ
ಕಾಮಿತ ಫಲದ ಕೃಪಾಂಗ ಪರ ಬ್ರಹ್ಮ
ನಾನೆಂಬೊ ದುರ್ಮತ ಗಜಸಿಂಗ4
ನಂದ ನಂದನ ಗುಣಸ್ತವನ ಮಾಳ್ಪ
ನಂದ ತೀರ್ಥರ ಮತಾಂಬುದಿ ಶೀತ ಕಿರಣ
ಒಂದಾರು ಜನರೊಳು ಕರುಣ ಕೃತ
ಮಂದ ನಂದಿನಿ ವ್ಯಜನಾದಿ ವ್ಯಾಖ್ಯಾನ 5
ಘನ್ನ ಮಹಿಮ ಜಿತಕಾಮಾ ಅ-
ರಣ್ಯ ಕಾಚಾರ್ಯ ಸೇವಿತ ಪದ ಪದುಮ
ಸನ್ನುತ ಶುಭ ಗುಣಸ್ತೋಮ ಮನವೇ
ಬಣ್ಣಿಸಲೊಶವೆ ಪಂಚಾಮೃತ ಮಹಿಮಾ 6
ವಾಸುದೇವನ ಗುಣತತಿಯ ಪೇಳಿ
ದಾಸ ಜನರಿಗೆ ಪಾಲಿಸಿದಿ ಸನ್ಮತಿಯಾ
ಭಾಸುರ ಕುಸುಮೂರ್ತಿರಾಯ ನೆನಿಸಿ'ಶ್ರೀಶಕಾರ್ಪರ ನರಹರಿ’ ಗತಿ ಪ್ರೀಯ 7
***