RAO COLLECTIONS SONGS refer remember refresh render DEVARANAMA
ಕಳೆಯ ಬ್ಯಾಡ ಮನವೇ ದಿನಾ ಕಳೆಯ ಬ್ಯಾಡ ಪ
ಹನುಮ ವಿನುತ ಪದವನುಜ ಮರೆತು ದಿನ ಅ.ಪ
ಆರನು ನಂಬಿದರಾರು ಕಾಯುವರು
ಧೀರ ದೇವಕಿಯ ಸುಕುಮಾರ ನುಳಿದು ದಿನ 1
ಯತಿಕುಲಪತಿ ಸುಖತೀರ್ಥರ ಮತ ರತುನದ
ಕ್ಷಿತಿಗೆ ಪಾರ್ಥಸಾರಥಿಯ ನುಳಿದು 2
ನಂದದ ಶಿರಿಗೋವಿಂದ ವಿಠಲ
ರಾಘವೇಂದ್ರ ವಿನುತ ದ್ವಂದ್ವನುಳಿದು ದಿನ 3
****