Showing posts with label ಗುಣಾತೀತ ಸದ್ಗುರು ಗಣನಾಥ mahipati. Show all posts
Showing posts with label ಗುಣಾತೀತ ಸದ್ಗುರು ಗಣನಾಥ mahipati. Show all posts

Saturday, 11 December 2021

ಗುಣಾತೀತ ಸದ್ಗುರು ಗಣನಾಥ ಘನ ಸುಖದಾಯಕ ankita mahipati GUNAATEETA SADGURU GANANAATHA GHANA SUKHADAAYAKA



by ಮಹೀಪತಿದಾಸರು

ಗುಣಾತೀತ ಸದ್ಗುರು ಗಣನಾಥ
ಘನಸುಖದಾಯಕ ಸದೋದಿತ ||ಪ||

ಅನುದಿನ ಮಾಡುವೆ ಮನೋಹರ
ಅಣುರೇಣುದೊಳು ನೀ ಸಾಕ್ಷಾತ್ಕಾರ
ಮುನಿಜನರಿಗಾಗುವಿ ಸಹಕಾರ
ನೀನಹುದೋ ಭಕ್ತರ ವಿಘ್ನಹರ ||೧||

ನಿಮ್ಮ ಬೋಧಗುಣವೆ ಸರಸ್ವತಿ
ಸಮ್ಯಗ್ ಜ್ಞಾನ ಬೀರುವ ನಿಜಸ್ಥಿತಿ
ಬ್ರಹ್ಮಾದಿಗಳೊಂದಿತ ನಿಜಖ್ಯಾತಿ
ಬ್ರಹ್ಮಾನಂದದೋರುವ ಫಲಶ್ರುತಿ ||೨||

ಬೇಡಿಕೊಂಬೆ ನಿಮಗೆ ಅನುದಿನ
ಕೊಡುವವರೆಗೆ ನೀನೆನಗೆ ನಿಧಾನ
ಮೂಢ ಮಹಿಪತಿ ಒಡೆಯ ನೀ ಪೂರ್ಣ
ಮಾಡುತಿಹೆ ನಿತ್ಯವು ನಾ ನಮನ ||೩||
****

ರಾಗ ಜೋಗಿಯಾ ತಾಳ ದೀಪಚಂದಿ (raga, taala may differ in audio)

 ಕಾಖಂಡಕಿ ಶ್ರೀ ಮಹಿಪತಿರಾಯರು

ಗುಣಾತೀತ ಸದ್ಗುರು ಗಣನಾಥ ಘನಸುಖದಾಯಕ ಸದೋದಿತ ಪ  


ಅನುದಿನ ಮಾಡುವೆ ಮನೋಹರ ಅಣುರೇಣುದೊಳು ನೀ ಸಾಕ್ಷಾತ್ಕಾರ ಮುನಿಜನರಿಗಾಗುವಿ ಸಹಕಾರ ನೀನಹುದೋಭಕ್ತರ ವಿಘ್ನಹರ 1 

ನಿಮ್ಮ ಭೋಧಗುಣವೆ ಸರಸ್ವತಿ ಸಮ್ಯಜ್ಞಾನ ಬೀರುವ ನಿಜಸ್ಥಿತಿ ಬ್ರಹ್ಮಾದಿಗಳೊಂದಿತ ನಿಜಖ್ಯಾತಿ ಬ್ರಹ್ಮಾನಂದ ದೋರುವ ಫಲಶ್ರುತಿ 2 

ಬೇಡಿಕೊಂಬೆ ನಿಮಗೆ ಅನುದಿನ ಕುಡುವವರಿಗೆ ನೀ ನಿಧಾನ ಮೂಢ ಮಹಿಪತಿ ಒಡೆಯ ನೀ ಪೂರ್ಣ ಮಾಡುತಿಹ ನಿತ್ಯವು ನಾ ನಮನ 3

***