ಪೂರ್ವಿಕಲ್ಯಾಣಿ ರಾಗ ಆದಿತಾಳ
SUNG AS PURANDARA VITTALA ANKITA
check similar kruti by Purandaradasa
ನಂಬಿಕೆಟ್ಟವರಿಲ್ಲವೊ ರಂಗಯ್ಯನ
ನಂಬದೆ ಕೆಟ್ಟರೆ ಕೆಡಲಿ ।।ಪ।।
ಅಂಬುಜನಾಭನ ಅಖಿಳಲೋಕೇಶನ
ಕಂಬುಕಂಧರ ಕೃಷ್ಣ ಕರುಣಾಸಾಗರನ ।।ಅ.ಪ।।
ತರಳ ಪ್ರಹ್ಲಾದ ಸಾಕ್ಷಿ ಸರಸಿಯೊಳಿದ್ದ
ಕರಿರಾಜನೊಬ್ಬ ಸಾಕ್ಷಿ
ಮರಣಕಾಲದಿ ಅಜಾಮಿಳ ಮಗನ ಕರೆಯೆ
ಗರುಡನೇರಿ ಬಂದ ಗರುವರಹಿತನ ।।೧।।
ದೊರೆಯೂರು ಏರಬಂದ ಪುತ್ರನನ್ನು
ಕೊರಳ್ಹಿಡದ್ಹೊರಡಿಸಲು
ಅರಣ್ಯದೊಳಗವನಿದ್ದ ಸ್ಥಳದಲ್ಲಿ
ಭರದಿಂದೋಡಿ ಬಂದ ಭಕ್ತವತ್ಸಲನ ।।೨।।
ತರುಣಿ ದ್ರೌಪದಿ ಸೀರೆಯ ದುಶ್ಯಾಸನ
ಸರಸರ ಸೆಳೆಯುತ್ತಿರೆ
ತರಳೆಯೊಡನೆ ತಾನಾಡುವುದು ಬಿಟ್ಟು
ತ್ವರಿತದಕ್ಷಯವಿತ್ತ ಸಿರಿಕೃಷ್ಣರಾಯನ ।।೩।।
****
ರಾಗ : ಕಲ್ಯಾಣಿ ತಾಳ : ಮಿಶ್ರಛಾಪು (raga, taala may differ in audio)
Nambi kettavarillavo rangayyana
Nambade kettare kedali ||pa||
Ambujanabana akilalokesana
Kambukandhara krushna karunasagarana ||a.pa||
Tarala prahlada sakshi sarasiyolidda
Karirajanobba sakshi
Maranakaladi ajamila magana kareye
Garudaneri banda garuvarahitana ||1||
Doreyuru Erabanda putranannu
Koralhidad~horadisalu
Aranyadolagavanidda sthaladalli
Baradindodi banda Baktavatsalana ||2||
Taruni draupadi sireya dusyasana
Sarasara seleyuttire
Taraleyodane tanaduvudu bittu
Tvaritadakshayavitta sirikrushnarayana ||3||
***
pallavi
nmbikeTTavarillavO rangayyana nambadE keTTarE keDali
anupallavi
ambujanAbhana akhila lOkEshana kambu kandara krSNa karuNAsAgarana
caraNam 1
taraLa prahlAda sAkSi sarasiyoLidda gajarAjanobba sAkSi
maraNa kAladi ajamiLa magananu kareye garuDanEri banda garuva rahitana
caraNam 2
taruNi draupadi sireya dishyAsana sara sara seLeyutire
karuNi tannoDatiyoDane ADuvuda biTTu tvaradi akSayaviTTa shrI krSNarAyana
***
ಅಂಬುಜನಾಭನ ಅಖಿಳ ಲೋಕೇಶನಕಂಬು ಕಂಧರ ಕೃಷ್ಣ ಕರುಣಾ ಸಾಗರನ||a.pa||
ತರಳ ಪ್ರಹ್ಲಾದ ಸಾಕ್ಷಿ ಸರಸಿಯೊಳಿದ್ದಕರಿರಾಜನೊಬ್ಬ ಸಾಕ್ಷಿ
ಮರಣಕಾಲದಿ ಅಜಾಮಿಳ ಮಗನನು ಕರೆಯೆಗರುಡನೇರಿ ಬಂದ ಗರುವ ರಹಿತನ||1||
ದೊರೆಯೂರು ಯೇರಬಂದ ಪುತ್ರನನ್ನುಕೊರಳಿÀ್ಹಡಿದ್ಹೊರಡಿಸಲು
ಅರಣ್ಯದೊಳಗವನಿದ್ದ ಸ್ಥಳದಲ್ಲಿಭರದಿಂದೋಡಿ ಬಂದ ಭಕ್ತವತ್ಸಲನ್ನ||2||
ತರುಣಿ ದ್ರೌಪದಿ ಸೀರೆಯ-ದುಶ್ಯಾಸನಸರಸರ ಸೆಳೆಯುತಿರೆ
ಕರುಣಿ ತನ್ನೊಡತಿಯೊಡನೆ ಆಡುವುದ ಬಿಟ್ಟುತÀ್ವರದಿ ಅಕ್ಷಯವಿಟ್ಟ ಸಿರಿ ಕೃಷ್ಣರಾಯನ||3||
****