Showing posts with label ರಾಘವೇಂದ್ರರೇ ನಿಮ್ಮ ಪಾದವ varadendra vittala. Show all posts
Showing posts with label ರಾಘವೇಂದ್ರರೇ ನಿಮ್ಮ ಪಾದವ varadendra vittala. Show all posts

Saturday, 1 May 2021

ರಾಘವೇಂದ್ರರೇ ನಿಮ್ಮ ಪಾದವ ankita varadendra vittala

 ರಾಗ : ಶ್ರೀ ತಾಳ : ತ್ರಿವಿಡಿ


ರಾಘವೇಂದ್ರರೇ ನಿಮ್ಮ ಪಾದವ ।

ಬಾಗಿ ಭಜಿಸುವೆ ತೋರುವದೈ ।

ನಾಗಶಯನ ತುತಿಸಿ ಸುಖಿಪ ।

ಭಾಗವತರೊಳಾಡಿಸೈ ।। ಪಲ್ಲವಿ ।।


ಶ್ರೀ ಸುಧೀಂದ್ರಕರಜರೆನಿಪ ।

ಶ್ರೀ ಸಮೀರಮತ ಚಂದ್ರಮಾ ।

ಶೇಷಶಯನನ ಪೂಜಿಸುವ । ನಿ ।

ರ್ದೋಷ ಗುರು ಕುಲ 

ಸುರದ್ರುಮಾ ।। ಚರಣ ।।


ಮಂಗಳಾಂಗರೇ ನಿಮ್ಮ ದರ್ಶನ ।

ಕಂಗಳಿಗೆ ಇತ್ತು ಬೇಗನೆ ।

ಹಿಂಗಿಸೈ ಭವ ತಾಪ ಗುರುವರ ।

ತುಂಗಾ ತೀರ ನಿವಾಸನೆ ।। ಚರಣ ।।


ಪರಮತೋಕ್ತಿಯ ಖಂಡಿಸುತ ।

ಪರಿಮಳಾಖ್ಯ ಗ್ರಂಥವಾ ।

ವಿರಚಿಸಿ ಧರಾ ಸುರರಿಗೆಲ್ಲ ।

ಹರುಷ ನೀಡಿದಿ ಮುನಿವರ ।। ಚರಣ ।।


ನಿನ್ನ ಪಾದೋದಕವ ಕೊಳ್ಳಲು ।

ಬನ್ನ ಬಡಿಪವೇ ದುರಿತವು ।

ಜನ್ಮ ಜನ್ಮಾಂತರದ ಪಾತಕ ।

ಮುನ್ನ ಪೋಗ್ವದು ಸತ್ಯವು ।। ಚರಣ ।।


ಅಂಧ ಕುಷ್ಠ ವ್ಯಾಧಿಗ್ರಸ್ತರು ।

ಚಂದದಿಂದಲಿ ಪ್ರತಿ ದಿನಾ ।

ವೃಂದಾವನವ ನಂಬಿ ಯಜಿಸಿ ।

ಬಂದ ಬಂಧ ವಿನಾಶನಾ ।। ಚರಣ ।।


ಮಾಸ ಶ್ರಾವಣ 

ವದ್ಯ ದ್ವಿತೀಯದಿ ।

ಸಾಸಿರಾರು ಭೂ ದಿವಿಜರು ।

ಸೋಸಿನಿಂದಲಿ ಪಾಡಿ ಪೀಡಿಪ ।

ಕ್ಲೇಶ ಪಾಶ ಕೀಳ್ವರೋ ।। ಚರಣ ।।


ಗುರುವೇ ನಿಮ್ಮಯ 

ಸ್ತೋತ್ರ ರತ್ನವ ।

ಸರುವ ಕಾಲದಿ 

ಪಠಿಸಲು ।

ಕರುಣದಿಂದಲಿ 

ಪೊರೆವನವರ ।

ಸಿರಿ ವರದೇಂದ್ರ 

ವಿಠಲನು ।। ಚರಣ ।।

***