Showing posts with label ಮರುತಗಳ ನಾಮವನು ಉದಯದಲಿಯೆದ್ದು vijaya vittala MARUTAGALA NAAMAVANU UDAYADALI YEDDU. Show all posts
Showing posts with label ಮರುತಗಳ ನಾಮವನು ಉದಯದಲಿಯೆದ್ದು vijaya vittala MARUTAGALA NAAMAVANU UDAYADALI YEDDU. Show all posts

Thursday, 7 October 2021

ಮರುತಗಳ ನಾಮವನು ಉದಯದಲಿಯೆದ್ದು ankita vijaya vittala MARUTAGALA NAAMAVANU UDAYADALI YEDDU

 ರಾಗ ಭೂಪಾಳಿ  ಖಂಡಛಾಪುತಾಳ 
Audio by Mrs. Nandini Sripad


ಶ್ರೀವಿಜಯದಾಸಾರ್ಯ ವಿರಚಿತ ಏಕೋನಪಂಚಾಶನ್ಮರುದ್ಗಣದ ತಾರತಮ್ಯ ಪದ 


ಮರುತಗಳ ನಾಮವನು ಉದಯದಲಿ ಯೆದ್ದು ।
ಸ್ಮರಿಸಿದವರ ದುರಿತ ಪರಿಹಾರವಾಗುವದು ॥ ಪ ॥ 

ಪ್ರಾಣ ಅಪಾನನು ವ್ಯಾನ ಉದಾನ ಸ - ।
ಮಾನ ಮತ್ತೆ ನಾಗ ಕೃಕಲ ಕೂರ್ಮ ॥
ಏನೆಂಬೆ ದೇವದತ್ತನು ಧನಂಜಯ ಪ್ರವಾ - ।
ಹನನು ವಿವಹ ಸಂಯಾ ಸಂವಾಹಾನೆಂದು ॥ 1 ॥ 

ಶೀಲ ಪರಾವಹ ಉದ್ವಹಾವಹ ಶಂಕು ।
ಕಾಲ ಶ್ವಾಸ ಅನಳ ಪ್ರತಿಯೂ ॥
ಬಾಲಕುಮುದಾ ಕಾಂತಾ ಶುಚಿ ಅಜಿತ ಗುರು ।
ಮೇಲಾಗಿ ಸಂಸಾ ಪ್ರವರ್ತಕಾ ಕಿಲ ರನ್ನ ॥ 2 ॥ 

ತರುವಾಯ ಅಜಿತ ಸಂಯನು ಕಪಿ ಜಡ ದೇವ ।
ಮರಳೆ ಮಂಡುಕ ಸತತ ಸಿದ್ಧ ರಕ್ತಾ ॥
ಸರಸ ಕೃಷ್ಣ ಪಿಕ ಶುಕ ಯತಿ ಭೀಮ ಹನು ।
ಮರಿಯದಲೆ ಪಿಂಗ ಅಹಂಪ್ರಾಣ ಕಂಪನಾ ॥ 3 ॥ 

ಇವರ ಸಹಿತವಾಗಿ ಸೂತ್ರನಾಮಕ ಮೂಲ ।
ಪವಮಾನನೊಡನೆ ಗಣನೆಯನು ಮಾಡಿ ॥
ತವಕದಿಂದಲಿ ತಾರತಮ್ಯವನೆ ತಿಳಿದು ।
ಶ್ರವಣದಲಿ ಕೇಳಿ ಸಾಕಲ್ಯವಾಗಿ ನಿತ್ಯ ॥ 4 ॥ 

ಇದನೆ ಪಠಿಸಿದರೆ ಜನ್ಮ ಜನುಮದಾ ಪಾಪ ।
ಉದರಿ ಪೋಗುವದು ಲೇಶ ವುಳಿಯದೆ ॥
ಪದುಮನಾಭಾ ನಮ್ಮ ವಿಜಯವಿಟ್ಠಲರೇಯನ ।
ಪದವ ಭಜಿಸುವದಕ್ಕೆ ಜ್ಞಾನವೆ ಪುಟ್ಟುವದು ॥ 5 ॥
***

ವಿಜಯದಾಸ - ಶತಸ್ಥಮರುತುಗಳು
ಮರುತಗಳ ನಾಮವನು ಉದಯದಲಿಯೆದ್ದು |
ದುರಿತ ಪರಿಹಾರವಾಗುವುದು ಪ

ಪ್ರಾಣ ಅಪಾನನು ವ್ಯಾನ ಉದಾನ ಸ |
ಮಾನ ಮತ್ತೆ ನಾಗ ಕೈಕಲಕೂರ್ಮ ||
ಏನೆಂಬೆ ದೇವದತ್ತನು ಧನಂಜಯ ಪ್ರವಾ |
ಹನನು ವಿವಹ ಸಂಯಾ ಸಂವಾಹನೆಂದು 1

ಶೀಲ ಪರಾವಹ ಉದ್ವಹ ವಾಹಶಂಕು |
ಕಾಲ ಶ್ವಾಸ ಅನಳ ಅನಿಲಪ್ರತಿಯೂ ||
ಬಾಲ ಕುಮುದಾಕಾಂತ ಶುಚಿಶ್ವೇತ ಅಜಿತಗುರು |
ಮೇಲಾಗಿ ಸಂಸಾರ ಪ್ರವರ್ತಕ ಕಿಲರನ್ನ 2

ತರುವಾಯ ಅಜಿತ ಸಂಯನು ಕಪಿ ಜಡದೇವ |
ಮರಳೆ ಮಂಡುಕ ಸತತ ಸಿದ್ಧ ರಕ್ತಾ ||
ಸರಸ ಕೃಷ್ಣ ಪಿಕಶುಕ ಯತಿ ಭೀಮಹನು |
ಮರಿಯದಲೆ ಪಿಂಗ ಅಹಂಪ್ರಾಣ ಕಂಪನ 3

ಇವರ ಸಹಿತವಾಗಿ ಸೂತ್ರನಾಮಕ ಮೂಲ |
ಪವಮಾನನೊಡನೆ ಗಣಣೆಯನು ಮಾಡಿ ||
ತವಕದಿಂದಲಿ ತಾರತಮ್ಯವನೆ ತಿಳಿದು |
ನಿತ್ಯ 4

ಇವನೆ ಪಠಿಸಿದರೆ ಜನ್ಮ ಜನುಮದ ಪಾಪ |
ಉದರಿ ಪೋಗುವದು ಲೇಶ ಉಳಿಯದೆ ||
ಪಮಮನಾಭ ನಮ್ಮ ವಿಜಯವಿಠ್ಠಲರೇಯನ |
ಪದವ ಭಜಿಸುವದಕ್ಕೆ ಙÁ್ಞನವೇ ಪುಟ್ಟವದು 5
***