Showing posts with label ಬಂದು ನಿಲ್ಲೋ ಕಣ್ಣ ಮುಂದೆ vijaya vittala BANDU NILLO KANNA MUNDE. Show all posts
Showing posts with label ಬಂದು ನಿಲ್ಲೋ ಕಣ್ಣ ಮುಂದೆ vijaya vittala BANDU NILLO KANNA MUNDE. Show all posts

Tuesday, 5 October 2021

ಬಂದು ನಿಲ್ಲೋ ಕಣ್ಣ ಮುಂದೆ ankita vijaya vittala BANDU NILLO KANNA MUNDE




ಬಂದು ನಿಲ್ಲೋ ಕಣ್ಣ ಮುಂದೆ 
ಬಂದು ನಿಲ್ಲೋ......।।ಪ।।

ಬಂದು ನಿಲ್ಲೋ ನನ್ನ ಪಾದಕ್ಕೆ ವಂದಿಪೆ
ಇಂದಿರೆಯರಸ ಗೋವಿಂದ ಮುಕುಂದ ನೀ... ।।ಅ.ಪ।।

ಅರಳಿದ ಕೆಂದಾವರೆಯ ಧಿಕ್ಕರಿಸುವ
ಚರಣಾರವಿಂದವ ನಿರುತ ತೋರು ನೀನು.....|।೧।।

ನೀಲಾಲಕ ಭ್ರಮರಕುಂತಲಮಂಡಿತ
ಮೇಲಾದ ರಾಕೇಂದು ಮುಖವ ತೋರಿಸುತಲಿ...।।೨।।

ಪದುಮನೇತ್ರನೆ ನಿನ್ನ ಸದನವೆನುತ ಎನ್ನ
ಹೃದಯದೊಳಗೆ ನಿಂತು ನಾ ಮುದದಿ ಭಜಿಸುವಂತೆ..|।೩।।

ಕರಿಯ ಮೊರೆಯ ಕೇಳಿ ಕರುಣದಿಂ ಬಂದಂತೆ
ಕರೆದಾಗ ನಿನ್ನ ದಿವ್ಯಚರಣವ ತೋರಿಸುತ....।।೪।।

ಅಜಭವಾದಿಗಳಿಗೆ ನಿಜಪದವನಿತ್ತಂತೆ
ಭಜಿಪ ಭಕ್ತರಿಗೊಲಿವ ವಿಜಯವಿಠಲರೇಯ....।।೫।।
***

ರಾಗ : ಆನಂದಭೈರವಿ ತಾಳ : ಅಟ್ಟ (raga, taala may differ in audio)

Bandu nillo kanna munde ||pa||

Bandu nillo nanna padakke vandipe
Indireyarasa govinda mukunda ni ||a.pa||


Aralida kendavareya dhikkarisuva
Charanaravindava niruta toru ninu ||1||

Nilalaka bramarakuntalamandita
Melada rakendu mukava torisutali ||2||

Padumanetrane ninna sadanavenuta enna
Hrudayadolage nintu na mudadi Bajisuvante ||3||

Kariya moreya keli karunadim bandante
Karedaga ninna divyacharanava torisuta ||4||

Ajabavadigalige nijapadavanittante
Bajipa Baktarigoliva vijayavithalareya ||5||
***

pallavi

bandu nillO kaNNAmunde

anupallavi

bandu nillO ninna pAdakke vandipe indireyarasa gOvinda mukundane

caraNam 1

nI lOlaka bhramara kuNDala maNDita mElAda rAkendu mukhava tOrisudali

caraNam 2

araLida vara kendAvareya dhikkarisuva caraNAravindava niruta tOrisutali

caraNam 3

paduma nEtrane ninna sadanavennuta enna hrdayadoLagiTTu mudadi bhajanemALpe

caraNam 4

kariya moreya kELi karuNadi bandante karedAga ninna divya caraNa tOrisutali

caraNam 5

aja bhavAdigaLige nijava tOuvante bhajipa bhaktaigolidu vijayaviThala ranga
***


ಬಂದು ನಿಲ್ಲೋ ಕಣ್ಣ ಮುಂದೆ            ।।ಪ।।

ಬಂದು ನಿಲ್ಲೋ ನನ್ನ ಪಾದಕ್ಕೆ ವಂದಿಪೆ 
ಇಂದಿರೆಯರಸ ಗೋವಿಂದ ಮುಕುಂದ ನೀ       ।।ಅ.ಪ।।

ಅರಳಿದ ಕೆಂದಾವರೆಯ ಧಿಕ್ಕರಿಸುವ 
ಚರಣಾರವಿಂದವ ನಿರುತ ತೋರು ನೀನು         ।।೧।।

ನೀಲಾಲಕ ಭ್ರಮರಕುಂತಲಮಂಡಿತ 
ಮೇಲಾದ ರಾಕೇಂದು ಮುಖವ ತೋರಿಸುತಲಿ   ।।೨।।

ಪದುಮನೇತ್ರನೆ ನಿನ್ನ ಸದನವೆನುತ ಎನ್ನ 
ಹೃದಯದೊಳಗೆ ನಿಂತು ನಾ ಮುದದಿ ಭಜಿಸುವಂತೆ  ।।೩।।

ಕರಿಯ ಮೊರೆಯ ಕೇಳಿ ಕರುಣದಿಂ ಬಂದಂತೆ 
ಕರೆದಾಗ ನಿನ್ನ ದಿವ್ಯಚರಣವ ತೋರಿಸುತ         ।।೪।।

ಅಜಭವಾದಿಗಳಿಗೆ ನಿಜಪದವನಿತ್ತಂತೆ 
ಭಜಿಪ ಭಕ್ತರಿಗೊಲಿವ ವಿಜಯವಿಠಲರೇಯ         ।।೫।।
****