ರಚನೆ: ಹೆಳವನಕಟ್ಟೆ ಗಿರಿಯಮ್ಮ
ಪದುಮನಾಭನೆ ನಿನ್ನ ಪಾದ ಕಿಂಕರನನ್ನ ಕೈಬಿಡು-
ವುದುಚಿತವೇ ರಂಗ
ಮುದದಿಂದ ನಿನ್ನ ಪಾದಕೆರಗುವೆ ನಾನು ತ್ವರಿ-
ತದಿ ನೀ ಕಾಯೊ ಎನ್ನೊಡೆಯ ರಂಗ
ಅಜಗರಶಯನನೆ ಬುಧಜನ ನಮಿತನೆ
ತ್ರಿಜಗವಂದಿತಪಾದ ಪದುಮಜ ಜನಕನೆ
ಶಿಶುವಾಗಿ ಗೋಕುಲದ ಪಶುಗಳ ಸಲಹಿದೆ
ಶಶಿಭೂಷಣಸಖ ಶಿಶುವ ಕಾಪಾಡೊ
ಸಾಂದೀಪನಿಗೊಲಿದೆ ಸಂದೇಹವಿಲ್ಲದೆ
ತಂದೆ ಹೆಳವನಕಟ್ಟೆ ರಂಗ ಕೃಪಾಂಗ
******
ಪದುಮನಾಭನೆ ನಿನ್ನ ಪಾದ ಕಿಂಕರ ನನ್ನ ಕೈಬಿಡು-
ವುದುಚಿತವೇ ರಂಗ ಪ.
ಮುದದಿಂದ ನಿನ್ನ ಪಾದಗೆರಗುವೆ ನಾನು ತ್ವರಿ-
ತದಿ ನೀ ಕಾಯೊ ಎನ್ನೊಡೆಯ ರಂಗ ಅ.ಪ.
ಅಜಗರಶಯನನೆ ಬುಧಜನ ನಮಿತನೆ
ತ್ರಿಜಗವಂದಿತಪಾದ ಪದುಮಜ ಜನಕನೆ 1
ಶಿಶುವಾಗಿ ಗೋಕುಲದ ಪಶುಗಳ ಸಲಹಿದೆ
ಶಶಿಭೂಷಣಸಖ ಶಿಶುವ ಕಾಪಾಡೊ 2
ಸಾಂದೀಪಗೊಲಿದೆ ಸಂದೇಹವಿಲ್ಲ
ತಂದೆ ಹೆಳವನಕಟ್ಟೆ ರಂಗ ಕೃಪಾಂಗ 3
***
cd available ಸಂಗೀತ: ಪ್ರವೀಣ್ ಡಿ ರಾವ್
cd available ಸಂಗೀತ: ಪ್ರವೀಣ್ ಡಿ ರಾವ್