ಕಾಖಂಡಕಿ ಶ್ರೀ ಕೃಷ್ಣದಾಸರು
ಎಂದು ಕಾಂಭುವೆ ರಂಗಯ್ಯ ನಾ ಪ
ಇಂದ್ರಾನುಜಗುಣ ಸಾಂದ್ರನ್ನಾ | ಉಪೇಂದ್ರನ್ನಾ | ಸುರ್ಯನ್ನಾ ಚಂದ್ರನನಾ 1
ಮಂದರಧರ ನಂದನ್ನಾ | ಸಂದನ್ನಾ ಮುಕುಂದನ್ನಾ 2
ವಾತಜಕೇತುಳ್ಳಾತನ ಸ್ಯಂದನಾ | ಸೂತ ತ್ರೈಜಗ ತಾತನ್ನಾ 3
ಭೂತಳ ಸಂತತ ಪೊತ್ತಿಹ | ಯಾದವ |ಸಾಧಾನಾಧಾನಾಡನ್ನಾ 4
ಮಿತಾನಂತಿ ಭಗಾತ್ರ ವಿರಾಜಿತ | ಪತ್ರಿ ಮುಕುಟಧ್ವಜ ಸೂತ್ರನ್ನಾ5
ಸತ್ರಿ ನೇತ್ರ ಮಿತ್ರ ವಿಧಾತೃ | ಪಿತೃ ವಿಚಿತ್ರ ಚರಿತನ್ನು 6
ಗುರುವರ ಮಹಿಪತಿ - ದೊರೆಯಾ | ಮುರ ಅರಿಯಾ ಸುಖವರ್ಯಾ ನರಹರಿಯಾ 7
***