ಕಾಖಂಡಕಿ ಶ್ರೀ ಕೃಷ್ಣದಾಸರು
ಜಗದೊಳಗಿದ್ದವ ಧೀರಾ | ಭವ ದೂರ ದೂರ ದೂರ ದೂರ ಪ
ಮೆರೆವ ಪ್ರಪಂಚ ಪರಮಾರ್ಥ ದೂರಾ | ಎರಡು ಸಮಲಿದ್ದವ ಧೀರ ಧೀರ ಧೀರ ಧೀರ 1
ಸಕಲವೆಲ್ಲವು ಹರಿಯಚ್ಚರಾ | ಯುಕುತಿಮನ ಬಲಿದವ ಧೀರ ಧೀರ ಧೀರ ಧೀರ 2
ಜರಿಯ ಸಂಸಾರವ ವಿರಕ್ತಿಯ ದೋರಾ | ನೀರು ಕಮಲದಂತೆ ಇರುವಾ ಧೀರ ಧೀರ ಧೀರ ಧೀರ 3
ಗುರುಮಹಿಪತಿ ಸ್ವಾಮಿ ಚರಣ ತತ್ಪರಾ | ಗಿರುವ ಸಾವಧಾನದಿಂದ ಧೀರ ಧೀರ ಧೀರ ಧೀರ 4
****