Showing posts with label ವ್ಯಾಸಾ ಬದರಿ ನಿವಾಸಾ ಎನ್ನಯ ಕ್ಲೇಶ ನಾಶನಗೈಸು vijaya vittala. Show all posts
Showing posts with label ವ್ಯಾಸಾ ಬದರಿ ನಿವಾಸಾ ಎನ್ನಯ ಕ್ಲೇಶ ನಾಶನಗೈಸು vijaya vittala. Show all posts

Thursday, 17 October 2019

ವ್ಯಾಸಾ ಬದರಿ ನಿವಾಸಾ ಎನ್ನಯ ಕ್ಲೇಶ ನಾಶನಗೈಸು ankita vijaya vittala

ವಿಜಯದಾಸ
ವ್ಯಾಸಾ ಬದರಿ ನಿವಾಸಾ | ಎನ್ನಯ |
ಕ್ಲೇಶ ನಾಶನಗೈಸು ಮೌನೀಶಾ | ಸಾಸಿರ ಮಹಿಮನೆ |
ದೋಷರಹಿತ ಸುರ ಭೂಸುರ ಪರಿಪಾಲ ಶಾಶ್ವತ ವೇದ ಪ

ಸತ್ಯವತಿ ವರಸೂನು ಭವತಿಮಿರ ಭಾನು |
ಭೃತ್ಯವರ್ಗದ ಸುರಧೇನು |
ಸತ್ಯಮೂರುತಿಯೆ ನೀನು | ಸ್ತುತಿಪೆ ನಾನು ||
ಹೊತ್ತು ಹೊತ್ತಿಗೆ ಸೂಸುತ್ತಿರಲೆನಗದು |
ಅತ್ಯಂತ ಸುಖತರ | ಸುತ್ತವ ಸುಳಿಯೆಂದೆತ್ತಿ ಕಡೆಗೆಯಿಡು |
ಎತ್ತ ನೋಡಲು ವ್ಯಾಪುತ ಸದಾಗಮ 1

ಲೋಕ ವಿಲಕ್ಷಣ ಋಷಿ | ಗುಣವಾರಿ ರಾಸಿ |
ವೈಕುಂಠ ನಗರನಿವಾಸಿ | ನಾಕಾರಿಗಳ ಕುಲದ್ವೇಷಿ ಚಿತ್ರ ಸನ್ಯಾಸಿ |
ಬೇಕೆಂದು ಭಜಿಪೆ ನಿಲಸಿ |
ಜೋಕೆ ಮಾಡುವುದ | ನೇಕ ಪರಿಯಿಂದ |
ನಿಕರ ತರಿಸದೆ | ಭೂಕಾಂತರು ನೋಡೆ |
ಸಾಕಾರ ದೇವ ಕೃಪಾಕರ ಮುನಿ ದಿವಾಕರ ಭಾಸಾ2

ನಿರುತ ಎನ್ನಯ ಅರಿಷ್ಟ |
ಮೆರೆವ ಉನ್ನತ ವಿಶಿಷ್ಟ |
ಉರಗ ಕಿನ್ನರ ಗಂಧರ್ವರ |
ಕರಕಮಲಗಳಿಂದ | ವರಪೂಜೆಗೊಂಬ |
ಸಿರಿ ಅರಸನೆ ನಮ್ಮ ವಿಜಯವಿಠ್ಠಲ ಪರಾ |
ಶರಸುತ ಬಲು ವಿಸ್ತರ ಜ್ಞಾನಾಂಬುಧೆ || 3
**********