Showing posts with label ಬಂದ ನೋಡಿ ಗೋವಿಂದ ಕೃಷ್ಣ ಬಂದ ಆನಂದ ತೀರ್ಥ purandara vittala BANDA NODI GOVINDA KRISHNA BANDA ANANDA TEERTHA. Show all posts
Showing posts with label ಬಂದ ನೋಡಿ ಗೋವಿಂದ ಕೃಷ್ಣ ಬಂದ ಆನಂದ ತೀರ್ಥ purandara vittala BANDA NODI GOVINDA KRISHNA BANDA ANANDA TEERTHA. Show all posts

Friday 6 December 2019

ಬಂದ ನೋಡಿ ಗೋವಿಂದ ಕೃಷ್ಣ ಬಂದ ಆನಂದ ತೀರ್ಥ purandara vittala BANDA NODI GOVINDA KRISHNA BANDA ANANDA TEERTHA



ಬಂದ ನೋಡಿ ಗೋವಿಂದ ಕೃಷ್ಣ ||ಪ||
ಬಂದ ಬಂದ ಆನಂದ ತೀರ್ಥ ಮು-
ನೀಂದ್ರ ವಂದ್ಯ ಹರಿ ನಂದಮುಕುಂದನು ||ಅ||

ಸರಸಿಜಾಕ್ಷ ದೊರೆಯ ಸರ್ವರ
ಪೊರೆವ ದಯಾನಿಧಿಯೆ
ಕರಿಯ ವರನ ಚಕ್ರದಿ ಉದ್ಧರಿಸಿದ
ಹರಿ ನಮ್ಮ ಪಾಲಿಪ ಪಾಲ್ಗಡಲೊಡೆಯನು

ಇಂದ್ರದೇವ ವಂದ್ಯ ಇಷ್ಟರ
ಇಂದು ಕಾವ್ಯ ನಿತ್ಯಾನಂದ
ಚಂದ್ರ ಕೋಟಿ ಲಾವಣ್ಯ ಮುಖದಲಿ
ಸುಂದರ ಅರಳೆಲೆ ಹಾರಗಳಿಂದಲಿ

ಚರಣ ಕಮಲಕಾಂತೆ ಸರ್ವದಾ
ಮಾಳ್ಪುದು ದಯವಂತೆ
ತರತರ ಜನರಿಗೆ ಕರೆದು ವರವನೀವ
ಸರಸಿಜಾಕ್ಷ ನಮ್ಮ ಪುರಂದರವಿಠಲನು
*******

ರಾಗ ಫರಜು. ಆದಿ ತಾಳ (raga tala may differ in audio)
 


rAgA:  paraju.  Adi tALA.


P:  banda nODi gOvinda krSNa

A:  banda Ananda tIrta munIndra vandya hari nanda mukundanu

C1:  sarasijAkSa doreye sarvara poreva dayAnidhiye

kariya varana cakradi uddhirisida hari namma pAlipa pAlgaDaloDeyanu

   2:  indradEva vandya iSTaraindu kAvya nityAnanda

candra kOTi lAvaNya mukhadali sundara araLela hAragaLindeli

   3:  caraNa kamalakAnte sarvadA mALpudu dayavante

taratara janarige karedu varavanIva sarasijAkSa namma purandara viTTalanu
****

pallavi

banda nODi gOvinda krSNa

anupallavi

banda banda Ananda tIrta munIndra vandya hari nanda mukundanu

caraNam 1

sarasijAkSa doreya sarvara poreva dayAnidhiye
kariya varana cakradi uddhirisida hari namma pAlipa pAlgaDaloDeyanu

caraNam 2

indradEva vandya iSTaraindu kAvya nityAnanda
candra kOTi lAvaNya mukhadali sundara araLela hAragaLindeli

caraNam 3

caraNa kamala kAnte sarvadA mALpudu dayavante
taratara janarige karedu varava nIva sarasijAkSa namma purandara viTTalanu
***

ಪಲ್ಲವಿ:
ಬಂದ ನೋಡಿ ಗೋವಿಂದ ಕೃಷ್ಣ

ಅನುಪಲ್ಲವಿ:
ಬಂದ ಆನಂದ ತೀರ್ಥ ಮುನೀಂದ್ರ ವಂದ್ಯ ಹರಿ ನಂದ ಮುಕುಂದನು

ಚರಣ:
1: ಸರಸಿಜಾಕ್ಷ ದೊರೆಯೆ ಸರ್ವರ ಪೊರೆವ ದಯಾನಿಧಿಯೆ
ಕರಿಯ ವರನ ಚಕ್ರದಿ ಉದ್ಧರಿಸಿದ ಹರಿ ನಮ್ಮ ಪಾಲಿಪ ಪಾಲ್ಗಡಲೊಡೆಯನು

2: ಇಂದ್ರದೇವ ವಂದ್ಯ ಇಶ್ಟರೈಂದು ಕಾವ್ಯ ನಿತ್ಯಾನಂದ
ಚಂದ್ರ ಕೋಟಿ ಲಾವಣ್ಯ ಮುಖದಲಿ ಸುಂದರ ಅರಳೆಲ ಹಾರಗಳಿಂದಲಿ

3: ಚರಣ ಕಮಲಕಾಂತೆ ಸರ್ವದಾ ಮಾಳ್ಪುದು ದಯವಂತೆ
ತರತರ ಜನರಿಗೆ ಕರೆದು ವರವನೀವ ಸರಸಿಜಾಕ್ಷ ನಮ್ಮ ಪುರಂದರ ವಿಟ್ಠಲನು
***