Showing posts with label ಮನವೆನ್ನ ಮಾತ ಕೇಳದು ಮಂದಜ್ಞಾನದಿ purandara vittala. Show all posts
Showing posts with label ಮನವೆನ್ನ ಮಾತ ಕೇಳದು ಮಂದಜ್ಞಾನದಿ purandara vittala. Show all posts

Friday, 6 December 2019

ಮನವೆನ್ನ ಮಾತ ಕೇಳದು ಮಂದಜ್ಞಾನದಿ purandara vittala

ಪುರಂದರದಾಸರು
ಮನವೆನ್ನ ಮಾತ ಕೇಳದು ಮಂದಜ್ಞಾನದಿ |ತನುವಿನಾಸೆಯ ಬಿಡಲೊಲ್ಲದು ಪ

ವನಜನಾಭನೆ ನಿನ್ನ ನಾಮ ಸಾಸಿರವ |ನೆನೆಯದೆ ಕಂಡಕಡೆಗೆ ಎರಗುತಲಿದೆ ಅ.ಪ

ದೇಹ ಸಂಬಂಧಿಗಳಾದವರೈವರು |ಮೋಹಪಾಶದಿಕಟ್ಟಿಬಿಗಿದಿಹರೈ ||ಕಾಯಅನಿತ್ಯವೆಂಬುದನರಿಯದೆ |ಮಾಯಾಪ್ರಪಂಚದಿಂದಲಿ ಬದ್ಧನಾಗಿಹೆ1

ಸಾಧುಸಜ್ಜನರ ಸಂಗವ ಮಾಡಿ ಪರಗತಿ-|ಗಾಧಾರವನು ಮಾಡಲೊಲ್ಲದಯ್ಯ ||ಕ್ರೋಧಕುಹಕದುಷ್ಟರೊಡನಾಡಿ ಕಾಲನ |ಬಾಧೆಗೆ ಒಳಗಾಗುವಂತೆ ಮಾಡುತಲಿದೆ 2

ಮದಗಜ ಮೈಯ ಮರೆತು ಮುಂದುಗಾಣದೆ |ಕದುವಿನೊಳಗೆ ಬಿದ್ದಂತಾದೆನಯ್ಯ ||ಹೃದಯ ಕಮಲದಲಿ ನಿಂತ ರಕ್ಷಿಸೋ ಎನ್ನ |ಪದುಮಾಕ್ಷ ವರದ ಶ್ರೀಪುರಂದರವಿಠಲ3
***

pallavi

manavenna mAta kELadu manda jnAnadi tanuvinAseyu biDalolladu

caraNam 1

dEha sambandhigaLAdavaraivaru mOha pAshadi kaTTi bigidiharai
dEhava nityavembuda gurutariyade mAya prapancavembudu baddhavAgide

caraNam 2

sAdhu sajjanara sangava mADi paragati kAdharavanu mADalolladayya
krOdha kuhaga duSTaroDanADi kAlana bAdhege guriya mADutalide hariye

caraNam 3

madagaja maiya maredu mundu kANade kaduviLoLage biddantAyitayya
hrdaya kamaladalli nintu rakSiso enna padumAkSa varada shrI purandara viTTala
***