Showing posts with label ರಾಮ ರಕ್ಕಸ ಸಂಕುಲ ಭೀಮ govinda vittala. Show all posts
Showing posts with label ರಾಮ ರಕ್ಕಸ ಸಂಕುಲ ಭೀಮ govinda vittala. Show all posts

Wednesday, 1 December 2021

ರಾಮ ರಕ್ಕಸ ಸಂಕುಲ ಭೀಮ ankita govinda vittala

 ರಾಗ -  :  ತಾಳ - 


ರಾಮ ರಕ್ಕಸ ಸಂಕುಲ ಭೀಮ

ಮುನಿದರೆ ಲೋಕ ವಿರಾಮ l ಸಾಮಸನ್ನುತ ನಿಸ್ಸೀಮ ll ಪ ll


ಕಾಮಿತಾರ್ಥ ಸುಮಹೋದಧೆ ನಿ 

ಷ್ಕಾಮನ ಮಾಡೆಲೊ ವಾಮನ ಮೂರ್ತಿ ll ಅ ಪ ll


ಶ್ಯಾಮಾ ರವಿ ಕುಲವಾರಿಧಿ ಸೋಮ l ಕಟ್ಟಿದೆ ಕಡಲಲಿ ಧಾಮ l 

ಸುರಪಗುಂಟು ತವ ಪ್ರೇಮ l ನಿರ್ಜಿತ ವೈರಿ ಸುತ್ರಾಮ ll

ಕಾಮನಯ್ಯ ಕಮ l ನೀಯ ಮೂರುತಿಯೆ 

ಕಾಮಿಪೆ ನಿನ್ನನು l ಭೂಮ ಗುಣಾರ್ಣವ ll 1 ll


ದಾತಾರಮ್ಮೆಗು ನಿಲುಕ ವಿಖ್ಯಾತ l ಬೊಮ್ಮನ ಪೆತ್ತನು ಸ್ವರತ 

ಭಕುತರ ನಡತೆಗೆ ಪ್ರೀತ l ಜಡ ಜಂಗಮದಲಿ ವಿತತ ll

ವೀತಿ ಹೋತ್ರ ಸಖ l ಮಾತರಿಶ್ವ ಪ್ರಿಯ 

ಪೂತನಿ ಮಾರಕ l ಪಾತಕ ಕಳೆಯೋ ll 2 ll


ಬಾಲಾ ಕೆಡಿಸಿದೆ ಗೋಪೇರ ಶೀಲಾ l ಜನನಿಗೆ ತೋರಿದೆ ಲೀಲಾ

ವದನದಿ ಲೋಕ ವಿಶಾಲಾ l ಮಾವ ಕಂಸಗೆ ನೀ ಕಾಲಾ ll 

ಪಾಲು ಮೊಸರು ಬೆಣ್ಣೆ l ಲೀಲೆಯಿಂದಲಿ ಮೆದ್ದು 

ಜಾಲತನದಿ ನಿಮ್ಮ l ಬಾಲರೆಂದ್ಹೇಳಿದೆ ll 3 ll


ಶ್ರೀತಾಕೇಶಿ ನಿಷೂದನ ವೃಷ್ಟೀಶ l ಸೋಜಿಗವೇನಿದು ಸರ್ವೇಶ 

ಸಂತತ ಭಜಿಪರ ಅಘನಾಶ l ದಾಸ ಜನರ ಹೃತ್ತೋಷ ll 

ವಾಸವ ಮುಖ ದೇ l ವೇಶ ನಿನ್ನಯ ಪಾದ

ಆಶ್ರಯ ದೊಳಗಿಟ್ಟು l ಪೋಷಿಸು ಎನ್ನ ll 4 ll 


ಕರ್ತಾ ರಕ್ಷಿಸೆನ್ನ ತ್ರಿಜಗದ್ಭರ್ತ l ನೀ ಲೋಕೈಕ ಸಮರ್ಥ

ಗುರು ಕರುಣದಿ ನಾನು ಕೃತಾರ್ಥ l ಒರೆವೆನೊ ನಾನೊಂದು ವಾರ್ತಾ

ಆರ್ತೇಷ್ಟದ ಗುರು l ಗೋವಿಂದವಿಟ್ಠಲ

ಮೂರ್ತಿ ನೆಲೆಸೊ ಮಮ l ಹೃತ್ಕಮಲದಲಿ ll 5 ll

***