ರಾಗ - : ತಾಳ -
ಗೋಪಾಲಕೃಷ್ಣ ಪಾಲಿಸೋ ತವ ಭವ್ಯವೆನಿಪ
ಶ್ರೀಪಾದಾ ತೋರಿಸೋ ll ಪ ll
ಪಾಪಿಯ ಭವ ಕೂಪಾರ ಹರಿಸಿ
ಕೈಪಿಡಿದೆನ್ನನು ಕಾಪಾಡುವುದು ಹರೆ ll ಅ ಪ ll
ಸೂರ್ಯ ಕೋಟಿ ಸಂಕಾಶ l ಶ್ರೀರುಕುಮಿಣೀಶ
ಪ್ರೇರ್ಯ ಪ್ರೇರಕ ಸರ್ವೇಶ
ಕಾರ್ಯಾ ಕಾರ್ಯ ವನರಿಯದವನು ನಾ - ಸುಖ
ವೀರ್ಯ ಸಾರ ಔದಾರ್ಯನೆ ಪಾಲಿಸೊ
ಕಂಸಾರಿ ಬಕವೈರಿ ಮುರ ವೈರಿ l ನಿಜ ಜನ ಭವಹಾರಿ ll ೧ ll
ಗೋಕುಲ ಪಾಲಾ ಹೇ ಬಾಲ - ಸತ್ಯಭಾಮೆ ಲೋಲ
ಶ್ರೀಕರ ಗುಣ ಬಹು ಜಾಲ ಶ್ರೀಕಮಲಜ ಭವ l
ನಾಕೇಶ ವಿನುತ ಶ್ರೀಕರ ಪದ ಪಲ್ಲವನವ l
ಲೋಕನವ ಕೊಡು ಕರಿವರದ l ಧ್ರುವ ವರದ l
ಜಿತ ಖಲ ಕುಲ ಸರ್ವಮದ ll ೨ ll
ವೇದಾಂತ ವೇದ್ಯಾ - ವೇದ ವೇದ್ಯಾ
ವೇದಾತ್ಮಿಕಾರಾಧ್ಯಾ l
ಆದಿ ಹರಿಯೇ ಗುರು ಗೋವಿಂದವಿಟ್ಠಲ
ಮೋದ ಪ್ರಮೋದ ಸಂ ಹೇಳಿದ l ಮೋದವ ನೀಯೋ
ಗೋವಿಂದ l ಮುಕುಂದ l ಮುನಿ ವಂದ್ಯ l
ಧೃತ ವ್ರಜಗಿರಿ ಆನಂದ ll ೩ ll
**