Showing posts with label ಹರಿಯೆನ್ನಬಾರದೆಜಿಹ್ವೆವಾರಂವಾರ prasannavenkata. Show all posts
Showing posts with label ಹರಿಯೆನ್ನಬಾರದೆಜಿಹ್ವೆವಾರಂವಾರ prasannavenkata. Show all posts

Tuesday, 19 November 2019

ಹರಿಯೆನ್ನಬಾರದೆಜಿಹ್ವೆವಾರಂವಾರ ankita prasannavenkata

by ಪ್ರಸನ್ನವೆಂಕಟದಾಸರು
ಹರಿಯೆನ್ನಬಾರದೆಜಿಹ್ವೆವಾರಂವಾರ ಪ.

ಪರಗತಿ ಮಾರ್ಗವು ದುರಿತವನಾಗ್ನಿಯುಪರಿಪರಿಭವರೋಗಕೌಷಧಅ.ಪ.

ಉರಿವ ಕಾಳಕೂಟ ಕಂಠದಿ ದಹಿಸಲುಹರಿನಾಮ ಹರನ ಕಾಯ್ತುಕರಿಉರಗವಿಷಾಗ್ನಿ ಶಸ್ತ್ರ ಭಯದಲಿಹರಿನಾಮ ಶಿಶುವ ಕಾಯ್ತುಶರಧಿಲಿ ನಕ್ಕರ ಚರಣವ ಕಚ್ಚಿ ಬರೆಹರಿನಾಮ ಕರಿಯ ಕಾಯ್ತುನಿರಯನಿವಾಸರಸುರಋಷಿಮುಖದಿಂದಹರಿನಾಮ ಎಲ್ಲರ ಕಾಯ್ತು 1

ಹಿರಿಯರ ನಿಕ್ಕರ ನುಡಿಯಿಂದಡವಿಲಿರೆಹರಿನಾಮ ಧ್ರುವನ ಕಾಯ್ತುಕುರುಕಂಟಕರುÀ ಅಭಿಮಾನವ ಕೊಳುತಿರೆಹರಿನಾಮ ಸತಿಯ ಕಾಯ್ತುಮರಳೊಮ್ಮೆ ದುರ್ವಾಸ ದ್ರೌಪದಿಗುಣಬೇಡೆಹರಿನಾಮ ಇರುಳೆ ಕಾಯ್ತುಗುರುಪುತ್ರನುರಿಬಾಣದುರವಣೆಗಡ್ಡಾಂತುಹರಿನಾಮ ಭ್ರೂಣವ ಕಾಯ್ತು 2

ವರಬಲದಿಂದಲ್ಲಿ ಅಸುರರು ನೋಯಿಸಲುಹರಿನಾಮ ಸುರರ ಕಾಯ್ತುಚಿರಪಾಪ ಭವಯಾತ್ರೆ ಘಟಿಸಲು ತುದಿಯಲಿಹರಿನಾಮ ಭಟರ ಕಾಯ್ತುಶರಣರ ಮಹಿಮೆಯಂತಿರಲಿ ಅಪಮರಣದಿಹರಿನಾಮ ನನ್ನ ಕಾಯ್ತುಗುರುಮಧ್ವವರದ ಪ್ರಸನ್ವೆಂಕಟೇಶ ಶ್ರೀಹರಿನಾಮಗತಿಎನ್ನೆ ಕಾಯ್ತು3
********