Showing posts with label ಕಾಯೋ ಕರುಣಿಸಿ ಎನ್ನ ರಂಗಾ ಬೇಗನೇ ಪಾದವದೋರಿಸಿ gurumahipati. Show all posts
Showing posts with label ಕಾಯೋ ಕರುಣಿಸಿ ಎನ್ನ ರಂಗಾ ಬೇಗನೇ ಪಾದವದೋರಿಸಿ gurumahipati. Show all posts

Wednesday, 1 September 2021

ಕಾಯೋ ಕರುಣಿಸಿ ಎನ್ನ ರಂಗಾ ಬೇಗನೇ ಪಾದವದೋರಿಸಿ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಕಾಯೋ ಕರುಣಿಸಿ ಎನ್ನ ರಂಗಾ | ಬೇಗನೇ ಪಾದವದೋರಿಸಿ | ನಮನಕ ಭವಬಲಿಯನು ಬಿಡಸಿ ರಂಗಾ ಪ 


ಶರಣೆಂದು ಸಕಲರು ಬಂದು ಪೋಗುವಾ | ನಿನ್ನ ಮಹಾದ್ವಾರದಲಿ | ಇರುತಿಹ ನಿನ್ನಯ ಭಕುತ ಬಲೆಯಲಿ | ಇರಿಸಿ ನೀ ಇಟ್ಟು ಅಚಲದಲಿ ರಂಗಾ | ಸಂಬಳನಿತ್ತಿಹ ಧನವ ನಾನೊಲ್ಲೆ | ಬೇಡುವೆ ಒಂದÀನೋ ರಂಗಾ | ಹಂಬಲ ದಣಿವಂತೆ ನಾಮ ಭಾಂಡಾರವ | ಮಾಡೆನ್ನ ಆಧೀನವ ರಂಗಾ 1 

ಕರಿದಲಿಧೃತಿ ಚಿತ್ತವನಿತ್ತು ಅನುದಿನಾ | ಹರಿಪಾದ ಸದ್ಬಕ್ತಿಯಾ ರಂಗಾ | ಮೆರೆವ ಮಂಟಪದೊಳು ನಿಲಿಸೆನ್ನ | ದುರಿತವ ತಟ್ಟದಂದದಿ ಪೊರೆಯೋ ರಂಗಾ2 

ಇಹಪರದಲ್ಲಿ ಏಕೋದೇವನೆಂಬ ಮುದ್ರೆಯಾ ಭಾವದ ಬಲದಿಂದಲಿ | ಮಹಿಪತಿ ಸುತ ಪ್ರಭು ಕೊರಳಿಗೆ ಹಾಕಿನ್ನು | ಸಲಹು ನೀ ಕೃಪೆಯಿಂದಾ ರಂಗಾ3

****