ಕಾಖಂಡಕಿ ಶ್ರೀ ಕೃಷ್ಣದಾಸರು
ಸಲ್ಲಾ ಸಲ್ಲಾ ಭಕುತಿಗೆ ಸಲ್ಲಾ ಸಲ್ಲಾ | ರತಿಯಿಲ್ಲದೆ ಡಾಂಭಿಕನು | ಬೆಲ್ಲದೊಳಗಿನ ಕಲ್ಲಿನಂದದಲಿಹನು | ಪರಿಪಾಕದಲ್ಯವ ದೂರಾಹನು | ಅವನೀಗ ಪ
ಗುರುವಿನಂಘ್ರೀಯ ಕಂಡು | ಗುರುತಕ ಬಾರದೆ | ಧರಿಯೊಳು ವ್ಯಭಿಚಾರಿತೆರನಂದದಿ | ಗುರುಭಕ್ತನೆನುಸುವ ಗುರಶೇವೆಘೋದಲುವ | ಗುರುನಾಮ ಜಾಗಿಸುವನು ಯಲ್ಲರೊಳು | ಗುರುದಯ ದೋರಿಸು | ನಿಷ್ಠಿಗೆ | ಹುರುಳಿಲ್ಲ ಮಾನಿಸನು 1
ಎಲ್ಲಾ ಶಾಸ್ತ್ರವ ಕಲೆ ಬಲ್ಲವ ನಾನೆಂದು | ಸೊಲ್ಲು ಸೊಲ್ಲಿಗೆ ತನ್ನ ಹೊಗಳುತಲಿ | ಒಳ್ಳೆವರನು ಕಂಡು ಮನ್ನಿಸಿಕೊಳ್ಳದೆ | ನಿಲ್ಲದೇ ವಾದಿಸುವ ಅವರಾಚು ಸೊಲ್ಲಿಗೆ | ಸೊಲ್ಲಿಗೆ ಕುಂದಿಡುವ | ಆಚಾರ | ಕ್ಷುಲ್ಲಕತನದಿ ನೋಡುವಾ ಅವನಿಗೆ 2
ಘನ ಗುರು ಮಹಿಪತಿ ಸ್ವಾಮಿಯ ಸೂತ್ರದಿ | ಅನುವಾದಾ ಲಾಭಾ ಲಾಭಗಳೆನ್ನುತ | ಜನರಿಗೆ ಹೇಳುವಾತಾ ಹಾದಿತಪ್ಪುವಾ | ಧನ ಮದಾಂಧರ ಮನವಾ | ಹಿಡಿವುತ | ತನುಪರವಶ ಮಾಡುವಾ | ಸಿದ್ಧಾಂತ | ಅನುಭವ ನುಡಿಮರವಾ ಅವನೀಗ 3
***