ಅಂಬಿಕಾಪತಿ ಶಂಭು ರಕ್ಷಿಸೆನ್ನ ।
ಶಂಬರಾರಿ ಹರನೆ
ನಂಬಿದೆನೋ ನಿನ್ನ ।। ಪಲ್ಲವಿ ।।
ಭವ ಕಮಲಭವ ಭೃಕುಟಿ
ಭವ ಹರನೆ ನೀ ಯೆನ್ನ ।
ಅವಗುಣಗಳೆಣಿಸದಿರು
ಕವಿಗೆಯನೇ ।
ಅವನಿಯೊಳಗೀಗ
ಸುವಿವೇಕಿಗಳ ಸಂಗ ।
ಜವದಿ ಪಾಲಿಸು ಮುದದಿ
ಜವನಾರಿ ಶಿವನೇ ।। ಚರಣ ।।
ಬಲ ವಿರೋಧಿ ವಿನುತಾ
ಇಳೆವರೂಥನೆ ನಿರುತ ।
ತಲೆ ಬಾಗಿ ಬೇಡುವೆನು
ಸಲಹೆಂದು ನಾ ।
ಎಲರುಣಿ ಭೂಷಣನೆ
ಒಲಿದು ಪಾಲಿಸು ದಯದಿ ।
ಛಳಿ ಗಿರೀಶನ ಅಳಿಯ
ನಳಿನಾರಿಧರನೇ ।। ಚರಣ ।।
ಸಿರಿ ಶ್ಯಾಮಸುಂದರ
ವಿಠಲನ ಸಖನೇ ।
ಮೊರೆಹೊಕ್ಕೆ ಮರೆಯದಿರು
ಗರಗೊರಳನೇ ।
ಕರುಣದಿಂದಲಿ ನಿನ್ನ
ಚಾರಣ ಸೇವೆಯನಿತ್ತು ।
ಕರ ಪಿಡಿದು ಕಾಪಾಡೊ
ಕರಿಚರ್ಮಧರನೆ ।। ಚರಣ ।।
****
ರಾಗ : ಕಾಂಬೋಧಿ ತಾಳ : ಝ೦ಪೆ (raga, taala may differ in audio)
..
ಅಂಬಿಕಾಪತಿ ಶಂಭು ರಕ್ಷಿಸೆನ್ನಶಂಬರಾರಿ ಹರನೆ ನಂಬಿದೆನೊ ನಿನ್ನ ಪ
ಭವಕಮಲ ಭವ ಭ್ರಕುಟ ಭವಹರನೆ ನೀಎನ್ನಅವಗುಣಗಳೆಣಿಸದಿರು ಕವಿಗೇಯನೆ ||ಅವನಿಯೊಳು ಎನಗೀಗ ಸುವಿವೇಕಿಗಳ ಸಂಗಜವದಿ ಪಾಲಿಸು ಮುದದಿ ಜವನಾರಿ ಶಿವನೆ 1
ಬಲವಿರೋಧಿ ವಿನುತ ಇಳೆವರೂಥನೆ ನಿರುತತಲೆವಾಗಿ ಬೇಡುವೆನು ಸಲಹೆಂದು ನಾಎಲರುಣಿ ಭೂಷಣೆನೆ ಒಲಿದು ಪಾಲಿಸುದಯದಿಛಳಿಗಿರೀಶನ ಅಳಿಯ ನಳಿನಾರಿ ಧರನೆ 2
ಸಿರಿರಮಣ ಶಾಮಸುಂದರ ವಿಠಲ ಸಖನೆಮೊರೆ ಹೊಕ್ಕೆ ಮರೆಯದಿರು ಗರಗೊರಳನೆಕರುಣದಿಂದಲಿ ನಿನ್ನ ಚರಣ ಸೇವೆಯನಿತ್ತುಕರವಿಡಿದು ಕಾಪಾಡೊ ಕರಿಚರ್ಮಧರನೆ 3
***