Showing posts with label ಜಯ ಜಯ ಕರುಣಾಕರ ಕೃಪಾಲ mahipati. Show all posts
Showing posts with label ಜಯ ಜಯ ಕರುಣಾಕರ ಕೃಪಾಲ mahipati. Show all posts

Wednesday, 11 December 2019

ಜಯ ಜಯ ಕರುಣಾಕರ ಕೃಪಾಲ ankita mahipati

ಯಮನ್ ರಾಗ ತೀನ್ ತಾಲ್

ಜಯ ಜಯ ಕರುಣಾಕರ ಕೃಪಾಲ
ಜಯ ಜಯ ಗುರುಮುನಿಜನ ಪ್ರತಿಪಾಲ ||ಧ್ರುವ||

ರಾಜತೇಜೋನಿಧಿ ರಾಜರಾಜೇಂದ್ರ
ರಾಜಿಸುತಿಹ ಮಕುಟಮಣಿ ಸುರೇಂದ್ರ
ಸುಜನಹೃದಯ ಸದ್ಗುಣಮಣಿ ಸಾಂದ್ರ
ಅಜಸುತ ಸೇವಿತ ಸುಜ್ಞಾನ ಸುಮೋದ ||೧||

ಅಗಣಿತಗುಣ ಅಗಾಧ ಅಪಾರ
ನಿಗಮಗೋಚರ ನಿರುಪಮ ನಿರ್ಧಾರ
ಸಗುಣ ನಿರ್ಗುಣನಹುದೋ ಸಾಕ್ಷಾತ್ಕಾರ
ಭಕ್ತವತ್ಸಲ ಮುನಿಜನ ಮಂದಾರ ||೨||

ಧೀರ ಉದಾರ ದಯಾನಿಧಿಪೂರ್ಣ
ತಾರಕಸ್ವಾಮಿ ಸದ್ಗುರು ನಿಧಾನ
ತರಳ ಮಹಿಪತಿ ಜನೋದ್ಧರಣ
ಚರಣಸ್ಮರಣಿ ನಿಮ್ಮ ಸಕಲಾಭರಣ ||೩||
*********