Showing posts with label ಭಾಗ್ಯವೆ ಪಾಲಿಸೆನ್ನಗೆ ಶ್ರೀ ಭಾರ್ಗವಿ ಜನನಿ varadesha vittala BHAAGYAVE PAALISENNAGE SRI BHAARGAVI JANANI. Show all posts
Showing posts with label ಭಾಗ್ಯವೆ ಪಾಲಿಸೆನ್ನಗೆ ಶ್ರೀ ಭಾರ್ಗವಿ ಜನನಿ varadesha vittala BHAAGYAVE PAALISENNAGE SRI BHAARGAVI JANANI. Show all posts

Saturday, 11 December 2021

ಭಾಗ್ಯವೆ ಪಾಲಿಸೆನ್ನಗೆ ಶ್ರೀ ಭಾರ್ಗವಿ ಜನನಿ ankita varadesha vittala BHAAGYAVE PAALISENNAGE SRI BHAARGAVI JANANI



kruti by ವರದೇಶ ವಿಠಲರು varadesha vittala dasaru

ಲಕ್ಷ್ಮೀದೇವಿಯ ಸ್ತೋತ್ರ


ಭಾಗ್ಯವೆ ಪಾಲಿಸೆನ್ನಗೆ ಶ್ರೀ ಭಾರ್ಗವಿ ಜನನಿ ಪ


ಭಾಗ್ಯವೆ ಪಾಲಿಸು ಭಾರ್ಗವಿ, ಕಮಲಜ

ಭಾರ್ಗಾದ್ಯನಿಮಿಷ ವರ್ಗಸೇವಿತೆ ಅ.ಪ


ಹರಿಸರ್ವೋತ್ತಮ ಗುರುಸುಖತೀರ್ಥರು

ಹರಫಣಿ ವಿಪಶಕ್ರಾದಿಗಳು

ತರತಮ ಭೇದ ಮೂರೆರಡು ಸತ್ಯ ವೆಂ -

ದರಿತು ಮನದಿ ಬಲು ಹರುಷ ಬಡುತಲಿಹ 1


ಕಾಮಕ್ರೋಧಗಳ ಗೆಲಿದು ಸತತನಿ -

ಷ್ಕಾಮ ಭಕ್ತಿಯಲಿ ಮನವುಬ್ಬಿ

ರಾಮ ರಾಮ ಎಂದ್ ಪ್ರೇಮದಿ ಪಾಡುತ

ರೋಮಾಂಚಿತ ತನುವಿಲಿನರ್ತಿಪ ಸೌ 2


ದುರ್ಜನ ಸಂಗ ವಿವರ್ಜಿಸಿ ನಿರುತದಿ

ಸಜ್ಜನಸಂಗಸುಖವ ಬಯಸಿ

ಅರ್ಜುನಸಖನ ಪದಾಬ್ಜಧ್ಯಾನ ದೊಳು

ಗರ್ಜಿಸುತಲಿ ನಿರ್ಲಜ್ಜನೆನಿಪ ಸೌ 3


ನಾನುನನ್ನದೆಂಬೊಹೀನ ಮತಿಯ ಕಳೆ -

ದೆನು ಮಾಡುತಿಹಕರ್ಮಗಳ

ಶ್ರೀನಿವಾಸನ ಪ್ರೇರಣೆ ಎಂದು ಸ -

ದಾನುರಾಗದಲಿ ಅರ್ಪಿಸುತಿಹ ಸೌ 4


ಸೂಸುವ ಭಕ್ತಿ ವಿರಕ್ತಿ ಜ್ಞಾನಧನ

ರಾಶಿಯ ಕೋಟ್ಟೀಭವಸುಖದ

ಆಶೆಬಿಡಿಸಿ ವರದೇಶ ವಿಠಲನ

ದಾಸರ ದಾಸರ ದಾಸ ನೆನಿಪ ಸೌ 5

***