Showing posts with label ಹಿಂದಿನ ಪುಣ್ಯ ಫಲವೆಂತೊಇಂದಿರೇಶಾನಂದದ prasannavenkata. Show all posts
Showing posts with label ಹಿಂದಿನ ಪುಣ್ಯ ಫಲವೆಂತೊಇಂದಿರೇಶಾನಂದದ prasannavenkata. Show all posts

Tuesday 19 November 2019

ಹಿಂದಿನ ಪುಣ್ಯ ಫಲವೆಂತೊಇಂದಿರೇಶಾನಂದದ ankita prasannavenkata

by ಪ್ರಸನ್ನವೆಂಕಟದಾಸರು
ಹಿಂದಿನ ಪುಣ್ಯ ಫಲವೆಂತೊಇಂದಿರೇಶಾನಂದದ ಲೀಲೆ ಅರುಹಿದ ಪ.ಚಿತ್ರವಿಚಿತ್ರ ಮಹಿಮೆಯ ತೋರುತಖಳದೈತ್ಯರನೆಲ್ಲ ಮಡುಹಿದದೈತ್ಯರನೆಲ್ಲ ಮಡುಹಿ ಬಳಲ್ದನೆಂದುಕಸ್ತೂರಿ ತೈಲವೆರಸಿ ತಂದು 1

ಶಂಕಿನಿ ಪದ್ಮಿನಿಯರೊಂದಾಗಿ ಕೃಷ್ಣನಪಂಕಜಾಸನದಲಿ ಕುಳ್ಳಿರಿಸಿಪಂಕಜಾಸನದಲಿ ಕುಳ್ಳಿರಿಸಿ ತಮ್ಮ ಒಲ್ವಕಂಕಣಗೈಯ ಮೌಳಿಯೊಳಿಟ್ಟು 2

ಈರೇಳು ಲೋಕದ ದೊರೆಯಾಗು ಭಕುತರಸಿರಿಯಾಗು ದಿತಿಜರರಿಯಾಗುಸಿರಿಯಾಗು ಭಕ್ತರ ದಿತಿಜಾರಿಯಾಗೆನುತಹರಸಿದರರ್ಥಿ ಮಿಗಿಲಾಗಿ 3

ಕುಂಭಕುಚದ ಕಾಮಿನಿಯರು ಹರುಷದಿಅಂಬುಜಾಕ್ಷನ ಪೂಸಿ ಕಿರುಬೆಮರಿಅಂಬುಜಾಕ್ಷನ ಪೂಸಿ ಕಿರುಬೆಮರಿ ದಣಿಯದೆ ಕದಂಬ ಕಡಿದಟಕಾಳಿಯ ತಂದು 4

ವಿಕ್ರಮಾನ್ವಿವತವಾದವ್ಯಾಕೃತ ಗಾತ್ರಕೆಅಕ್ಕರಿಂದೆ ತೈಲನಾಶನವಅಕ್ಕರಿಂದಲಿ ತೈಲನಾಶನವ ಪೂಸಿ ಜಗುಳಲುಘಕ್ಕನಂಬರವ ಬಿಗಿದುಟ್ಟ 5

ಹದವಾದ ಬಿಸಿನೀರ ಪೊಂಬಂಡೆಯೊಳುತುಂಬಿಪದುಮಗಂಧೆಯರು ನೀರೆರೆದರುಪದುಮಗಂಧೆಯರು ನೀರೆರೆವ ಸಂಭ್ರಮಕ್ಕೆಮುದದಿಸುರರುಹೂಮಳೆಗರೆದರು6

ಮುಂಬರಿಯುತ ಬಾಲೆಯರುತಕದಿಂದಅಂಬುಧಾರೆಯ ನಿಲ್ಲಗುಡದೆರೆದುಅಂಬುಧಾರೆಯ ನಿಲ್ಲಗುಡದೆರೆದುಜಾಂಬೂನದಾಂಬರವುಡಿಸಿ ಕರೆತಂದು 7

ಚಿತ್ರಮಂಟಪಕೆ ನವರತ್ನ ತೆತ್ತಿಸಿದ ಕಂಭಕಸ್ತೂರಿ ಕಾರಣೆ ರಚನೆಯಕಸ್ತೂರಿ ಕಾರಣೆ ರಚನೆಯ ಮಧ್ಯದಿಮುತ್ತಿನ ಹಸೆಯೊಳು ಕುಳ್ಳಿರಿಸಿ 8

ನೀಲಮಾಣಿಕಮೋಘದಿಂದಲೊಪ್ಪುವ ಪದಕಲೋಲನೇತ್ರೆಯರಳವಡಿಸಿದರುಲೋಲನೇತ್ರೆಯರು ಅಳವಡಿಸಿ ಅಂಗುಲಿಗೆಲ್ಲ ಮುದ್ರಿಕೆನಿಟ್ಟು ನಲಿದರು 9

ಮುಕುಟಕೌಸ್ತುಭಮಣಿಯುಕುತ ಭೂಷಣವಿಟ್ಟುರುಕುಮಿಣಿ ಸತ್ಯರೆಡಬಲದಿರುಕುಮಿಣಿ ಸತ್ಯರೆಡಬಲದಿ ಕುಳ್ಳಿರೆನಿತ್ಯಮುಕುತಗಾರತಿಯ ಬೆಳಗಲು 10

ಚಿನ್ನದ ಹರಿವಾಣದಿ ರನ್ನದಾರತಿಯಿಟ್ಟುಕನ್ನೇರು ಕಿರುನಗೆ ಬೀರಿದರುಕನ್ನೇರು ಕಿರುನಗೆ ಬಿರಿಯುತ ಪಣೆಯೊಳುಪೊನ್ನಿನಾಕ್ಷತೆಯಿಟ್ಟು ಲಲಿತವ 11

ಜಯ ರಾಮ ತ್ರೈಧಾಮ ಜಯ ಜೀಮೂತಶಾಮಜಯ ಪೂರ್ಣಕಾಮ ಸಾಸಿರನಾಮಜಯ ಪೂರ್ಣಕಾಮ ಸಾಸಿರನಾಮನೆಂದುಭಯರಹಿತಗಾರತಿಯ ಬೆಳಗಿದರು 12

ಚಿತ್ತಜನಯ್ಯಗೆ ಚಿನುಮಯ ದೇಹಗೆಉತ್ತಮಗುಣಗಣ ಭರಿತಗೆಉತ್ತಮಗುಣಗಣ ಭರಿತಗೆ ಪರಮಪವಿತ್ರೇರಾರತಿಯ ಬೆಳಗಿದರು 13

ಪನ್ನಗಾದ್ರಿವಾಸ ಪ್ರಸನ್ನವೆಂಕಟೇಶಕನ್ನೆ ಲಕ್ಷ್ಮಿಯ ಕೂಡಿ ಆರೋಗಣೆಯಕನ್ನೆ ಲಕ್ಷ್ಮಿಯ ಕೂಡ ಆರೋಗಣೆಯ ಮಾಡಿತನ್ನ ಭಕ್ತರಿಗೆಲ್ಲ ಸುಖಪ್ರೀತ 14
*******