Showing posts with label ಳಳ- RSS- ನಡೆದು ತೋರುವೆವು others rss. Show all posts
Showing posts with label ಳಳ- RSS- ನಡೆದು ತೋರುವೆವು others rss. Show all posts

Friday, 24 December 2021

ನಡೆದು ತೋರುವೆವು others rss

   

RSS song .

ನಡೆದು ತೋರುವೆವು ಲೋಕಕೆ ನೀತಿಯ

ಅಂಜುವೆದೆಯು ನಮ್ಮದಲ್ಲ

ಹಿಂದುತ್ವದ ಅಭಿಮಾನದ ಬದುಕಲಿ

ಕೀಳರಿಮೆಗೆ ಎಡೆಯಿಲ್ಲ || ಉತ್ತಿಷ್ಠ ಭಾರತ || ||ಪ||


ವಿಶ್ವದ ಮನುಜರು ಅಗ್ರಜ ಅನುಜರು

ತಾಯಿ ಭೂಮಿ ನಮಗೆಲ್ಲಾ||

ಪ್ರಕೃತಿಗೆ ಉಪಕೃತಿ ನಮ್ಮಯ ಸಂಸ್ಕೃತಿ

ಸ್ವಾರ್ಥ ಸುಖದ ಸೋಂಕಿಲ್ಲ||

ಬಂಧುತ್ವದ ಸಾವಿರದಿತಿಹಾಸಕೆ

ಜಗದಲಿ ಸರಿಸಮರಿಲ್ಲ ||೧||


ಪುಣ್ಯದ ವರ್ಧನೆ ಪಾಪ ನಿವಾರಣೆ

ಪುರುಷಾರ್ಥದ ಸಾಧನೆಗೆ||

ಕರ್ಮದ ಫಲವಿದೆ ಧರ್ಮದ ಬಲವಿದೆ

ಸಾರ್ಥಕತೆಯ ನೆಮ್ಮದಿಗೆ||

ಆಧ್ಯಾತ್ಮದ ಅವಿರತ ಅನುಭೂತಿಗೆ

ಹೋಲಿಕೆಗಳ ಹರಹಿಲ್ಲ ||೨||


ಆಕ್ರಮಣಕರ ಎದೆ ಡವಡವಗುಡುತಿದೆ

ಕಾದಿದೆ ವೈರಿಗೆ ಮರಣ||

ಅನುಭವದುಸಿರಲಿ ಹಿಂದೂ ಹೆಸರಲಿ

ಸಂಕ್ರಮಿಸಿದೆ ಜಾಗರಣ||

ಕಾಲವನಾಳಿದ ವಿರಾಟ ಪುರುಷಗೆ

ಸೋಲೆಂಬುದರರಿವಿಲ್ಲ ||೩||

***

naDedu tOruvevu lOkake nItiya

aMjuvedeyu nammadalla

hiMdutvada aBimAnada badukali

kILarimege eDeyilla || uttiShTha BArata || ||pa||


viSvada manujaru agraja anujaru

tAyi BUmi namagellA||

prakRutige upakRuti nammaya saMskRuti

svArtha suKada sOMkilla||

baMdhutvada sAviraditihAsake

jagadali sarisamarilla ||1||


puNyada vardhane pApa nivAraNe

puruShArthada sAdhanege||

karmada Palavide dharmada balavide

sArthakateya nemmadige||

AdhyAtmada avirata anuBUtige

hOlikegaLa harahilla ||2||


AkramaNakara ede DavaDavaguDutide

kAdide vairige maraNa||

anuBavadusirali hiMdU hesarali

saMkramiside jAgaraNa||

kAlavanALida virATRa puruShage

sOleMbudararivilla ||3||

***