..
kruti by ಬೇಲೂರು ವೈಕುಂಠ ದಾಸರು belur vaikunta dasaru
ಕಂತುಪಿತ ಕರುಣಾಕರ ನಿನ್ನ
ಚಿಂತೆಯೊಳಗಿರಿಸಿ ಸಲಹಯ್ಯಾ ಜನಾರ್ದನಾ ಪ
ಮಣ್ಣು ಮರ ಕಲ್ಲಿಂದಲಾದಡಂ ವಿರಚಿಸಿದ
ಹೆಣ್ಣು ರೂಪನೆ ಕಂಡು ಮರುಳುಗೊಂಡೂ
ಉಣ್ಣದುರಿಯುವಮನವ ನಿನ್ನಡಿದಳಿರನೆಳಲ
ತಣ್ಣಸದಲಿರಿಸಿ ಸಲಹಯ್ಯ ಜನಾರ್ದನಾ 1
ಗೋ ವಿಪ್ರ ವಧೆಯಿಂದಲಾದಡಂ ವಿರಚಿಸಿದ
ಲಾವಿಕವೆಂದದನೆ ಬಯಸಿ ಬಯಸೀ
ದೇವ ಮನಕನವರತ ನಿನ್ನ ಪದ ತೀರ್ಥದಾ
ಜೀವನವನಿತ್ತು ಸಲಹಯ್ಯಾ 2
ಭೂಮಿಯದು ಬುಧದಾನ ಸುರದಾನವಾದಡಂ
ಆ ಮಹಿಯ ತನ್ನತ್ತ ಸೆಳೆವೆನೆಂದೂ
ಕಾಮಿಸುವ ಮನಕೆ ನಿನ್ನಮಲಪಾದಾಂಬುಜವ
ಸೀಮೆಯೊಳಗಿರಿಸು ವೈಕುಂಠ ಜನಾರ್ದನಾ 3
***