Showing posts with label ಏಳು ಬೆಳಗಾಯಿತು ಯದುಕುಲೋತ್ತಮ ankita vijaya vittala. Show all posts
Showing posts with label ಏಳು ಬೆಳಗಾಯಿತು ಯದುಕುಲೋತ್ತಮ ankita vijaya vittala. Show all posts

Thursday 5 August 2021

ಏಳು ಬೆಳಗಾಯಿತು ಯದುಕುಲೋತ್ತಮ ankita vijaya vittala

ವಿಜಯದಾಸ

ಏಳು ಬೆಳಗಾಯಿತು ಯದುಕುಲೋತ್ತಮ | ಪರಮೇಷ್ಠಿ ಹರ ಸುರಪಾಲಕರು ಪ


 ಆಳುಸಹಿತದಲಿ ರಂಗಾಅ.ಪ. 


ವೇದವನು ತಮ ಕದ್ದು ಒಯ್ದನು | ಆಧಾರಾಗದೆ ಅದ್ರಿ ಮುಣಗಿತು || ಮೇದಿನಿಯ ಬಳಕೊಂಡು ಹೋದನು | ಅದಿತಿಯ ಸುತನು ಭಾದಿಗಾಗದಲೆ ಬಂದು ಸಕಲರು || ಆದರಣೆಯಿಂದ ಕೈಯ ಮುಗಿದು ನೀ | ದಯಾನಿಧಿ ಎಂದು ಹೊರಗೆ ಕಾದು ಐದಾರೆ ರಂಗ 1 


ಅಟ್ಟುಳಿ ಹೆಚ್ಚಿತು ವೆ ಗ್ಗಳಿಸಿದರು ಛತ್ರಿಯರು ಈರೈದು ತಲೆಯವನು || ಬಲವಂತನಾದನು ಆರಿಗೊಶವಿಲ್ಲ | ಇಳೆಗೆ ಭಾರವು ತೂಕವಾಯಿತು ಕಳ-| ವಳಗೊಳಲಾರೆವೆನುತಲಿ ಅಳುಕಿ ಭಯದಲಿ | ನಿಮ್ಮ ಬಾಗಿಲ ಬಳಿಯ ಸಾರಿದರೊ ರಂಗಾ2 


ಮೂರು ಪುರದವರೀಗ ನಮ್ಮನ್ನ ಮೀರಿದರು | ಕಲಿಪುರುಷ ಸುಜನರ ಮೇರೆದಪ್ಪಿಸಿ ನಡೆಸಿ || ಬಲು ವಿಕಾರ ಮಾಡಿದನು ಈ ರೀತಿ ಶ್ರಮವೆಂದು | ಸಿರಿ ವಿಜಯ- || ವಿಠ್ಠಲ ಕಾರಣಾರ್ಧವ ಕಳೆದು | ಮುಂದೆ ಉದ್ಧಾರ ಮಾಡಿದನು 3

***


pallavi


Elu beLagAyittu yadukulOttamA vAlagake paramESTi hara sura pAlakaru


anupallavi


hara sura pAlakaru bandaru tammaya aLu sahitadali ranga


caraNam 1


vEdavanu tama kaddu voidanu adhArAgade adri muNugitu

mEdiniya baLakoNDu hOdanu aditiya sutanu bAdhigAgadale bandu sakalaru

AdaraNeyinda kaiya mugidu nI dayAnidhi endu horage kAdu aidArE rangA


caraNam 2


baliya aTTuLi heccitu veggaLisidaru chatriyaru irayidu talayavanu

balavantanAdanu arigoSavillA ilAge bhAravu tUkavAyitu kaLavaLa

goLalAre venutali aLuki veyadali nimma bAgila baLiya sAridarO rangA


caraNam 3


mUru puradavarIga nammanna nIridaru kali puruSa sujanara mEre

dappisi naDEsi balu vikAra mADidanu I rIti shramavendu pELalu

mAra pita vijayaviThala kAraNArthava kaLedu munde uddhAra mADidanu

***