Showing posts with label ದ್ವಾರಪಾಲಕರಿಗಾನಮಿಪೆ ನಿತ್ಯ jagannatha vittala. Show all posts
Showing posts with label ದ್ವಾರಪಾಲಕರಿಗಾನಮಿಪೆ ನಿತ್ಯ jagannatha vittala. Show all posts

Saturday 14 December 2019

ದ್ವಾರಪಾಲಕರಿಗಾನಮಿಪೆ ನಿತ್ಯ ankita jagannatha vittala

ಜಗನ್ನಾಥದಾಸರು
ದ್ವಾರಪಾಲಕರಿಗಾನಮಿಪೆ ನಿತ್ಯ
ಶ್ರೀ ರಮಣ ನಾರಯಣನ ಪುರತ್ರಯದೊಳಿಹ ಪ

ಜಯ ವಿಜಯ ಬಲಪ್ರಬಲ ಚಂಡ ಪ್ರಚಂಡ ನಿ
ರ್ಭಯ ನಂದ ಸುನಂದ ಕುಮುದ ಕುಮುದಾ
ಧಾಮ ಸುಧಾಮ ಸಂ
ಪ್ರಿಯ ತಮನ ಆe್ಞÁಧಾರಕರೆಂದೆನಿಸುವ 1

ಲಸದೂಧ್ರ್ವಪುಂಡ್ರ ದ್ವಾದಶನಾಮ ಶಂಖ ಸುದ
ರುಶನ ಸುಗದಾ ಪದ್ಮ ನಾಮ ಮುದ್ರಾ
ಕುಸುಮ ಮಾಲಿಕೆ ಧರಿಸಿ
ನಸುನಗುತಹರ್ನಿಶಿಗಳಲಿ ಹರಿಯ ತುತಿಪಾ 2

ಕುಂಡಲ ಹಾರ ಪದಕ ಕಂ
ಕಣ ನಡುವಿನೊಡ್ಯಾಣ ಪೀತಾಂಬರ
ಕ್ವಣಿತನೂಪುರ ಗೆಜ್ಜೆ ಚರಣಾಭರಣ ಸುಲ
ಕ್ಷಣರಾದ ಸರ್ವಾಂಗ ಸುಂದರರೆನಿಸುವಾ 3

ಕರದೊಳೊಪ್ಪುವ ಗದಾಯುಧ ಕುಂದರದನ ಕ
ಸ್ತುರಿನಾಮ ಮಾಣಿಕಕ್ಷತೆಯ ಧರಿಸಿ
ಕುಸುಮ ಕೇಸರಿ ಗಂಧದಿಂ ಭಯಂ
ನಿತ್ಯ 4

ಮೂರು ಬಾಗಿಲಲಿ ಶ್ರೀ ದೇವಿಯಿಪ್ಪಳು ವಾಯು
ಭಾರತಿ ಆಜ್ಞದಿಂದೀ ದೇವರು
ವೀರಜಯ ವಿಜಯಾದಿಗಳಿಗೆ ವಿಷ್ವಕ್ಸೇನ
ಪ್ರೇರಕನು ತಾನಾಗಿ ಶ್ರೀಶನರ್ಚಿಪನೆಂದು 5

ಹೃದಯ ಶ್ರೋತ್ರ ಚಕ್ಷುವದನಾದಿ ಕರಣದೊಳು
ನದನದಿಗಳೊಳು ಮಹೋದಧಿಗಳೊಳಗೆ
ಉದಿತ ಭಾಸ್ಕರ ಮಂಡಲದಿ ದೇವಗೃಹದಿ
ಸದಸದ್ವಿಲಕ್ಷಣ ಸುದತಿಸಹ ಪೂಜಿಸುವ 6

ದ್ರುಹಿಣ ಮೊದಲಾದ ಸುಮನಸ ಪೂಜ್ಯ ಚರಣಾಬ್ಜ
ಮಹಿಮ ಮಂಗಳಚರಿತ ಸುಗುಣ ಭರಿತ
ಅಹಿರಾಜ ಶಯನ ಜಗನ್ನಾಥವಿಠಲನ ಸ
ನ್ಮಹಿಮೆಗಳ ತಿಳಿಸಿ ತೋರಿಸಲಿ ಮನ್ಮನದೀ 7
ತೀರ್ಥಕ್ಷೇತ್ರ
**********