..
kruti by Srida Vittala Dasaru Karjagi Dasappa
ರೂಪ ತೋರಿಸೊ ರಂಗ ನಿಜರೂಪ ತೋರಿಸೋ ಪ
ರೂಪ ತೋರಿಸೋ ರತಿಪತಿ ಜನಕ
ಗೋಪ ಮನೆಗೆ ಬರುವ ತನಕ ಅ.ಪ
ಕೇವಲ ಕಲ್ಪದ್ರುಮನಹುದೆಂದು
ಭಾವಿಸುವೆನೋ ನೀನಿಂದು 1
ಅಣು ಮಹಧ್ಭಟಿನಾಘಟಿತ ಚತುರನೆ
ಪ್ರಾಣತ ಕಾಮದನು ನೀನೇ 2
ಶ್ರೀದವಿಠಲ ಶರಣು ಎನೆ ಕೇಳೋ
ಪಾದಕ್ಕೆರಗುವೆ ಕೃಪಾಳೋ 3
***