Showing posts with label ಚಿತ್ರವಾಗಿದೆ ನೋಡು ನಮಗೆ ಸತ್ಯ ಗುಣಸಾಂದ್ರ ವರದೇಂದ್ರ varadagopala vittala varadendra teertha stutih. Show all posts
Showing posts with label ಚಿತ್ರವಾಗಿದೆ ನೋಡು ನಮಗೆ ಸತ್ಯ ಗುಣಸಾಂದ್ರ ವರದೇಂದ್ರ varadagopala vittala varadendra teertha stutih. Show all posts

Saturday, 1 May 2021

ಚಿತ್ರವಾಗಿದೆ ನೋಡು ನಮಗೆ ಸತ್ಯ ಗುಣಸಾಂದ್ರ ವರದೇಂದ್ರ ankita varadagopala vittala varadendra teertha stutih

varadendra teertha rayara mutt yati 1785 stutih

ರಾಗ : ಸೌರಾಷ್ಟ್ರ ತಾಳ : ಆದಿ


ಚಿತ್ರವಾಗಿದೆ ನೋಡು ನಮಗೆ ।

ಸತ್ಯ ಗುಣಸಾಂದ್ರ ವರದೇಂದ್ರ ।

ಯತಿಗಳ ಮಹಿಮೆ ।। ಪಲ್ಲವಿ ।।


ವಿದ್ವದ್ವಿಶೇಷಕ್ಕೆ ಶೇಷ 

ತಲೆದೂಗಿದನು ।

ಸದ್ವ್ರಯದ ದಾನಕೆ 

ಕರ್ಣನ ಮೀರಿದಾ ।

ಬುದ್ಧಿಯಲಿ ಧೀಕ್ಷಣ 

ಮನ್ನಿಸಿದಾ ಸದಾಚಾರ ।

ಪದ್ಧತಿಯ ನೋಡಿ ಬ್ರಹ್ಮನು 

ಸಮ್ಮತಿಸಿದ ಬಲು ।। ಚರಣ ।।


ಸರ್ವಜ್ಞತಾ ಗುಣಕೆ ಶರ್ವ 

ಬಲು ಶ್ಲಾಘಿಸಿದ ।

ಊರ್ವಿ ಪೊಗಳಿದಳಿವರ

ಕ್ಷಮೆ ಧರ್ಮಕೇ ।

ಸರ್ವದಾ ಧೈರ್ಯ 

ಗಾಂಭೀರ್ಯಕೆ ಮಹಾ । ಹಿಮ ।

ಪರ್ವತಾಭ್ಧಿಗಳು ಸೈ 

ಸೈಯೆಂದವರಿಕೊ ।। ಚರಣ ।।


ವರದ ಗೋಪಾಲವಿಠಲನ 

ವಲಿಮಿಂದ । ಶ್ರೀ ।

ವರದೇಂದ್ರ ಯತಿ 

ವರಪ್ರದ ಮಹಿಮೆಗೆ ।

ಸುರಧೇನು ಕಲ್ಪತರು 

ವರ ಚಿಂತಾರತುನಗಳು ।

ಸ್ವರ್ಗ ಲೋಕದಲ್ಲಿ 

ಬೆರಗಾದವಿದಕೊ ।। ಚರಣ ।।

****