ಪುರಂದರದಾಸರು
ದಾರಿ ಏನಿದಕೆ ಮುರಾರಿ ನೀ ಕೈಯ ಹಿಡಿಯದಿದ್ದರೆ-|ದಾರಿ ಏನಿದಕೆ ಮುರಾರಿ? ಪ
ಕಷ್ಟ-ಕರ್ಮಂಗಳ ಎಷ್ಟಾದರು ಮಾಳ್ಪೆ |ಎಷ್ಟಾದರೂ ನುಡಿದೆ ಗುರುಹಿರಿಯರ ||ದುಷ್ಟರ ಸಂಗವ ಬಹಳ ಮಾಡಿದರಿಂದ |ಶಿಷ್ಟರ ಸೇವೆಯೆಂದರಾಗದೆನಗೆ 1
ಪರರ ದೂಷಣೆ ಪರಪಾಪಂಗಳನೆಲ್ಲ |ಪರಿಪರಿಯಲ್ಲಿ ಆಡಿಕೊಂಬೆ ನಾನು ||ಹರಿನಾಮಾಮೃತವ ಹೇಳದೆ ಕೇಳದೆ |ಹರಟೆಯಲ್ಲಿ ಹೊತ್ತುಗಳೆದೆ ನಾ ಹರಿಯೆ 2
ಪಾತಕಕರ್ಮಗಳ ಮಾಡಿದಜಾಮಿಳಗೆ |ಪ್ರೀತಿಯಿಂದಲಿ ಮುಕ್ತಿ ಕೊಡಲಿಲ್ಲವೆ? ||ನೂತನವೇಕಿನ್ನುಸೂರ್ಯಮಂಡಲ |ರೀತಿಯಾದನು ಸಿರಿಪುರಂದರವಿಠಲ 3
*******