Showing posts with label ಗತಿಯಾವುದೆನಗೆ ಶ್ರೀಪತಿಯೆ jagannatha vittala. Show all posts
Showing posts with label ಗತಿಯಾವುದೆನಗೆ ಶ್ರೀಪತಿಯೆ jagannatha vittala. Show all posts

Saturday 14 December 2019

ಗತಿಯಾವುದೆನಗೆ ಶ್ರೀಪತಿಯೆ ankita jagannatha vittala

ರಾಗ ಕಾಂಬೋಧಿ (ಬಾಗೇಶ್ರೀ) ಝಂಪೆತಾಳ

ಗತಿಯಾವುದೆನಗೆ ಶ್ರೀಪತಿಯೆ ಪೇಳೊ ||ಪ||
ಮತಿಗೆಟ್ಟು ಪ್ರತಿದಿನದಿ ಸತಿಯ ಬಯಸುವೆನೊ ||ಅ.ಪ||

ಮರುಳುಬುದ್ಧಿಗಳಿಂದ ಕರಸೂಚನೆಯ ಮಾಡಿ
ತರಳೆಯರ ತಕ್ಕೈಸಿ ಸರಸವಾಡಿ
ಇರುಳು ಹಗಲು ಹೀಗೆ ದುರುಳತನದಲಿ ತಿರುಗಿ
ಧರೆಯೊಳಗೆ ನಾನೊಬ್ಬ ಹರಿದಾಸನೆನಿಸಿದೆನು ||೧||

ನಾಚಿಕೆಯ ತೊರೆದು ಬಲು ನೀಚರಲ್ಲಿಗೆ ಪೋಗಿ
ಯಾಚಿಸುವೆ ಸುವಿಚಾರಹೀನನಾಗಿ
ಆ ಚತುರ್ದಶ ವರುಷದಾರಭ್ಯ ಈ ವಿಧದಿ
ಆಚರಿಪೆನೈ ಸವ್ಯಸಾಚಿಸಖ ಕೃಷ್ಣ ||೨||

ನಾನು ನನ್ನದು ಎಂಬ ಹೀನಬುದ್ಧಿಗಳಿಂದ
ಜ್ಞಾನಶೂನ್ಯನು ಆದೆ ದೀನಬಂಧು
ಸಾನುರಾಗದಿ ಒಲಿದು ನಾನಾಪ್ರಕಾರದಲಿ
ನೀನು ಪಾಲಿಸು ಹರಿಯೆ ಜ್ಞಾನಗುಣಪರಿಪೂರ್ಣ ||೩||

ಅಂಬುಜಾಕ್ಷನೆ ನಿನ್ನ ನಂಬಿ ಭಜಿಸುವರ ಪಾ-
ದಾಂಭುಜಕ್ಕೆರಗದಲೆ ಸಂಭ್ರಮದಲಿ
ತಂಬೂರಿಯನು ಪಿಡಿದು ಡಂಭತನದಲಿ ನಾನು
ಶಂಬರಾರಿಗೆ ಸಿಲುಕಿ ಬೆಂಬಿಡದೆ ಚಾಲ್ವರಿದೆ ||

ಪರಮೇಷ್ಟಿಯಾರಭ್ಯ ತೃಣಜೀವ ಪರಿಯಂತ
ತರತಮಂಗಳ ತಿಳುಹಿ ತರುವಾಯದಲ್ಲಿ
ಗುರುಹಿರಿಯರಲಿ ಭಕುತಿ ವೈರಾಗ್ಯವನೆ ಕೊಟ್ಟು
ಸಿರಿಜಗನ್ನಾಥವಿಠಲ ನಿರುತ ನೀ ಪೊರೆಯದಿರೆ ||೫||
***

pallavi

gatiyAvudenage shrIpatiya pELO

anupallavi

matigeTTu prati dinadi satiya bayasuvenO

caraNam 1

maruLu buddhigaLilla kara sUcaneya mADi taraLeyara takkaisi darasavADi
iruLu hagalu hIge duruLatanadali tirugi dhareyoLage nAnobba haridAsa nenisedenu

caraNam 2

nAcikeya toredu balu nIcarallige pOgi yAcisuve suvicAra hInanAgi
A caturdasha vaurSadhArabya I vidadhi Acaripenai savyasAki sakha krSNa

caraNam 3

nAnui nannadu emba hIna buddhigaLinda jnAna shUnyanu AdE dInabandhu
sAnurAgadi volidu nAnA prakAradali nInu pAlisu hariye jnAna guNa paripUrNa

caraNam 4

ambujAkSane ninna nambi bhajisuvara pAdAmbujakke keragadale sambhramadali
tambUriyenu piDidu Dambhatanadali nAnu shabarArige siluki bembiDade cAlvaride

caraNam 5

paramESThi Arabhya traNajIva paryanta taratamangaLa tiLuhi taruvAyadalli
guruhiriyarali bhakuti vairAgyavane koTTu siri jagannAtha viThala niruta nI poreyedire
***

ಜಗನ್ನಾಥದಾಸರು
ಗತಿ ಯಾವುದೆನಗೆ ಶ್ರೀಪತಿಯೆ ಪೇಳೊ ಪ

ಪರ ಸತಿಯರನು ಬಯಸುವೆನೊ ಅ.ಪ.

ಕರ ಸೂಚನೆಯ ಮಾಡಿ
ತರುಣಿಯರ ತಕ್ಕೈಸಿ ಸರಸವಾಡಿ
ಇರುಳು ಹಗಲು ಹೀಗೆ ದುರುಳತನದಲಿ ತಿರುಗಿ
ಧರೆಯೊಳಗೆ ನಾನೊಬ್ಬ ಹರಿದಾಸನೆನಿಸಿದೆನು 1

ನಾಚಿಕಿಲ್ಲದಲೆ ಬಲು ನೀಚರಲ್ಲಿಗೆ ಪೋಗಿ
ಯೂಚಿಸುವೆ ಸನ್ಮಾರ್ಗ ಯೋಚಿಸದಲೆ
ಆ ಚತುರ್ದಶ ವರುಷರಾರಭ್ಯ ಈ ವಿಧದಿ
ಅಚರಿಪೆನೈ ಸವ್ಯ ಸಾಚಿಸಖ ಶ್ರೀ ಕೃಷ್ಣ 2

ನಾನು ನನ್ನದು ಎಂಬ ಹೀನ ಬುದ್ಧಿಗಳಿಂದ
e್ಞÁನ ಶೂನ್ಯನು ಆದೆ ದೀನ ಬಂಧು
ಸಾನುರಾಗದಿ ಒಲಿದು ನಾನಾ ಪ್ರಕಾರದಲಿ
ನೀನೆ ಕರುಣಿಸು ಹರಿಯೆ e್ಞÁನಗುಣ ಪರಿಪೂರ್ಣ 3

ಅಂಬುಜಾಕ್ಷನೆ ನಿನ್ನ ನಂಬಿ ಭಜಿಸುವರ ಪಾ
ದಾಂಬುಜಕ್ಕೆರಗದಲೆ ಸಂಭ್ರಮದಲಿ
ತಂಬೂರಿಯನು ಪಿಡಿದು ಡಂಭತನದಲಿ ನಾನು
ಶಂಬರಾರಿಗೆ ಸಿಲುಕಿ ಬೆಂಬಿಡದೆ ಚಾಲ್ವರಿದೆ 4

ಪರಮೇಷ್ಟಿಯಾರಭ್ಯ ತ್ರಣಜೀವ ಪರ್ಯಂತ
ತರತಮವ ತಿಳಿಸಿ ತರುವಾಯದಲ್ಲಿ
ಗುರುಹಿರಿಯರಲಿ ಭಕುತಿ ವೈರಾಗ್ಯವನೆ ಕೊಟ್ಟು
ಸಿರಿಜಗನ್ನಾಥ ವಿಠಲ ನಿರುತ ನೀ ಪೊರೆಯದಿರೆ 5
*********