Audio by Vidwan Sumukh Moudgalya
ಶ್ರೀ ವಿಜಯದಾಸರ್ಯ ವಿರಚಿತ ಶುಚೀಂದ್ರಂ ಮಹಾತ್ಮೆ ಸುಳಾದಿ
ರಾಗ : ರೇವತಿ
ಇಂದ್ರಶೌಚವಿಧಾನತ್ತೆ ನ ಶುಚೀಂದ್ರಾತಿ ಪೌರುಷಮ್ ।
ಅನಿಂದ್ರಸ್ಯ ಮನಶ್ಯೌಚಂ ಮಮಕೃತ್ವಾತದಾರ್ಜಯ ॥
ಧ್ರುವತಾಳ
ಯೋಗದಭ್ಯಾಸಕಿಗದು ಜಾಗರ ಉಳ್ಳ ಕ್ಷೇತ್ರ
ಆಗಮ ಸಿದ್ಧಾಂತದಲ್ಲಿ ನೋಡಿ
ಯೋಗಿ ಜನರು ಇಲ್ಲಿ ಭೋಗದಾಶಿ ತೊರದು-
ಲಾಗಿಸುವರು ಭವರೋಗ ವನಧಿ
ಭೂಗೊಳಾದೊಳಗೋರ್ವ ರಾಗದ್ವೇಷವೇ ಬಿಟ್ಟು
ಜಾಗು ಮಾಡಿದಿಲ್ಲಿಗೆ ಸಾಗೀ ಬಂದೂ
ಬಾಗಿ ಕೇವಲ ದೃಢವಾಗಿ ಪ್ರಜ್ಞಾತೀರ್ಥದಲ್ಲಿ
ತಾಗುಪ್ತದಲ್ಲಿ ಮಿಂದಾಗಲೆ ಕರ್ಮನಾಶ ಭಾಗೀರಥಿನಿಧೆ
ಸಾಗರದಲ್ಲಿಗೆ ಪೋಗಿ ಪುಣ್ಯಾಪಡದೂ
ಯಾಗಾದಿಗಳ ಮಾಡಲಾಗಿ ಆವಫಲ
ವಾಗುವದದಕೆ ನೂರಾಗುವದು ಸಿದ್ಧ
ಮೂಗೊಣ್ಣನೊಬ್ಬ ಬಲ್ಲ
ನಾಗಶಯನ ವಿಜಯವಿಠಲ ಸುಧೀಂದ್ರ
ಆಗರಾ ವಾಸನ ನಾಗ ಗಮನ ಭಜಿಸೀ
ನೀಗಿಕೊಂಡನು ಬಂದ ಭೋಗ ವ್ಯಾಕುಲಾ ll1ll
ಮಟ್ಟತಾಳ
ಪರಸತಿಗೆ ಅಳುಕಿ ಹರಿಯನುಶಾಪಾ
ಧರಿಸಿದನು ತನ್ನ ಶರೀರಾವಾದ್ಯಂತಾ
ದುರಿಯೋನಿಯಲ್ಲಿ ಪರಮ ದುಶ್ಚಿತ್ತನಾಗಿ
ಥರವಲ್ಲದೇ ಪೋದಾ ವರಸಭಾ ಸ್ಥಾನಕ್ಕೆ
ಮರಳಿ ತನ್ನೊಳು ತಾನೇ ಮರುಗಿಕೊಳುತಲಿರೇ
ಸುರಮುನಿ ನಾರದನು ಭರದಿಂದಲಿ ಬರಲೂ
ಎರಗಿದ ಚರಣಕ್ಕೆ ಕರಗಳನು ಮುಗಿದು
ಪರಮಪುರುಷರಂಗ ವಿಜಯವಿಠಲನ್ನ
ಶರಣಗೆ ತನ್ನಯ ಪರಿಯೆಲ್ಲಾ ಬಿನ್ನೈಸೆ ll2ll
ರೂಪಕತಾಳ
ಬೆಸನ ಕೇಳುತಮಾನಿ ನಸುನಗುತಾ ಪರಸತಿಯಾ
ಘಸನಿ ಪೋದವನ ಮನ್ನಿಸದಲ್ಲ ಜಗವೆಲ್ಲ
ಹಸಗೇಡಿಯಾಗಿ ಸುಮನಸ ತತಿ ಕೇಳಿದ
ಕುಶಲಕ್ಕೆ ಉಪಾಯ ಪುಶಿಯದಂತೀಗಾಲ
ವಸುಧಿಯೊಳಗೆ ರಂಜಿಸುವ ಮಹೇಂದ್ರಾದ್ರಿ
ಪಸರಿಸುತ್ತಾ ಬಲು ಪೆಸರಾಗಿದೆ ಅತ್ರಿ
ಋಷಿ ಆಶ್ರಮಾ ಉಂಟು
ಉಸರಿಕ್ಕಾದಲೆ ಪೋಗಿ
ಎಸೆವಾ ಮನದಲ್ಲಿ ಭಜಿಸು ಮಧುಸೂದನನ
ಹಸನಾಗಿ ವಿಶಾಪ ವಶದಿಂದ ಕಡಿಬಿದ್ದು
ಲಸತು ಕಾಯದಲಿ ಶೋಭಿಸುತಪೋಗು ಎನಲಾಗಿ
ಬಿಸಜನಯನ ನಮ್ಮ ವಿಜಯವಿಠಲನ ನೆ-
ನೆಸುತ ಬಂದನು ಅತ್ರಿಋಷಿ ಇದ್ದ ಭೂಮಿಗೆ ll3ll
ಝಂಪೆತಾಳ
ಬಂದು ಇಂದ್ರನು ತಪಸಿಗೆ ಕುಳಿತನು ಗ-
ಜೇಂದ್ರನ್ನ ಕರದು ಉದಕವ ತರ ಪೇಳಲು
ಅಂದು ಐರಾವತನು ಕೈಕೊಂಡು ಮಲಯಾದ್ರಿ
ಲಿಂದ ಪುಟ್ಟಿದ ತಾಂಬ್ರ ಪರ್ಣಿಯದತ್ತ
ಲಿಂದ ಮಾರ್ಗವ ಮಾಡಿ ತನ್ನ ಒಡಿಯನಿದ್ದಾ
ಮುಂದೆ ಬಿಟ್ಟದು ಬಲು ಭಕುತಿಯಿಂದ
ತಂದ ವಿಚಾರವನು ನೋಡಿ ವೃತ್ರ ವೈರಿ
ಮಿಂದು ಶುಚಿಯಾಗಿ ಮುದದಿಂದಲಿ ಕೊಂಡಾಡಿ
ಮಂದರಧರದೇವ ವಿಜಯವಿಠಲ ಸೂ-
ಧೇಂದ್ರ ಸ್ವಾಮಿಯ ಪಾದ ದ್ವಂದ್ವವನು ನೆನಸುತ್ತ ll4ll
ತ್ರಿವಿಡಿತಾಳ
ಆಸನವನು ಹಾಕಿ ಶ್ವಾಸೋಚ್ಛ್ವಾಸವ ಬಂಧಿಸಿ
ಲೇಶವಾದರು ಕಾಯದಾಶಿಯಾ ಮಾಡದೆ
ಬ್ಯಾಸಿಗೆ ಬಿಸಲೆನದೆ ಬ್ಯಾಸರಕಿಯ ಒಡದೆ
ವಾಸವ ಕುಳಿತು ಸಂತೋಷದಲ್ಲಿ
ಕೇಶವ ಮಧುಸೂದನ ಶ್ರೀಶನಂಘ್ರಿಯ ಒಂದು
ವಾಸರ ಬಿಡದರ್ಚಿಸಲಾಗೀ
ದೇಶಾಧಿಪ ಸುಧೇಂದ್ರವಾಸ ವಿಜಯವಿಠಲ
ದಾಸಗೆ ಒಲಿದು ಬಂದ ಸತಿಯ ಕೂಡ ll5ll
ಅಟ್ಟತಾಳ
ಗೌತುಮನ್ನ ಸತಿ ಪತಿವ್ರತೆ ಅಹಲ್ಯಾ
ಕಾತುರದಲ್ಲಿ ಪುರುಹೂತನ ಶಾಪಿಸಿರೆ
ಸೋತ್ತುಮರಿಗೆ ಬಲು ಪಾತಕ ಬಂದರೆ
ಚಾತುರ್ಯದಲಿ ಅಜಾತು ಮಹಾವಿಷ್ಣು
ಪ್ರೀತಿಯಲ್ಲಿ ತಿಳಿದ ತಾನು ಭಕುತರ
ಭೀತಿಯ ಹರಸುವ ಮಾತು ಪೇಳದ ಮುನ್ನ
ಭೂತಳದೊಳು ಮಧುಘಾತಿ ಸುಧೇಂದ್ರಾ ನಿ-
ಕೇತನ ವಿಜಯವಿಠಲಾ ತುಮದೇವ ll6ll
ಆದಿತಾಳ
ಪೊಂದಿದ ಕಲುಷ ಕಳೆದು ಇಂದ್ರನುದ್ಧರಿಸಿದ
ಅಂದು ಮೊದಲಾಗಿ ದೇವೇಂದ್ರ ಸಾಸಿರ ನಯನಾ-
ನೆಂದು ಕರಿಸಿಕೊಂಡು ಸುಖದಿಂದ ವಾಲಗವಾಗದ
ಸಂದೇಹ ತೊರದು ನರರು ಬಂದು ಯಾತ್ರಿಮಾಡಲು ಗೋ -
ವಿಂದನು ಕರುಣಾರಸದಿಂದ ಸಾಕುವನವರ
ಎಂದೆಂದು ಬಿಡದೆ ಸುಧೇಂದ್ರಸ್ವಾಮಿ ಮಧುವೈರಿ
ವೃಂದಾವನ ಪ್ರೀಯ ವಿಜಯವಿಠಲರೇಯನ ॥7॥
ಸಂದರುಶನವಾಗೆ ಮಂದ ಬುದ್ಧಿ ಪೋಪುವವು
ಜತೆ
ದಕ್ಷಿಣ ಸಾಲಗ್ರಾಮಕ್ಷೇತ್ರ ಸುಧೇಂದ್ರಾ
ಅಕ್ಷಯಾಬ್ಧಿವಾಸಾ ವಿಜಯವಿಠಲಧೀಶಾ ॥8॥
**********