Showing posts with label ಮಹಾದೇವ ಶಿತಿಕಂಠ ದಾಸ ಕಲ್ಪಮಹೀಜ pranesha vittala. Show all posts
Showing posts with label ಮಹಾದೇವ ಶಿತಿಕಂಠ ದಾಸ ಕಲ್ಪಮಹೀಜ pranesha vittala. Show all posts

Friday, 15 November 2019

ಮಹಾದೇವ ಶಿತಿಕಂಠ ದಾಸ ಕಲ್ಪಮಹೀಜ ankita pranesha vittala

by ಪ್ರಾಣೇಶದಾಸರು
ಮಹಾದೇವ ಶಿತಿಕಂಠ ದಾಸ ಕಲ್ಪಮಹೀಜ ಬಿನ್ನವಿಪೆ ನಿರ್ದೋಷ ||ಆಹಾ ||ಕುಹಕಾರಿ ಹರಿಪಾದ ಮಹಿಮೆ ಕೊಂಡಾಡಿಸೊ |ಗಹನವಿಕ್ರಮಭೀಮ ಮಹೀಧರಪ ಜಾಧವ ಪ 

ಸ್ಫಟಿಕಾಭ ಶ್ರೀಕಂಠ ದಕ್ಷ ಧ್ವಂಸಿ |ನಿಟಿಲಲೋಚನ ಸುರಪಕ್ಷ ಹೇ || ಧೂ |ರ್ಜಟ ಹೀನ ವಿಷಯಾಖ್ಯ ಕಕ್ಷವಹ್ನಿ|ಕುಟಿಲತ್ವ ಬಿಡಿಸತಿ ದಕ್ಷ ||ಆಹಾ||ಕಠಿಣ ಸಂಸಾರದಿತ್ರುಟಿಮಾತ್ರ ಸುಖ ಕಾಣೆ |ವಟುರೂಪಿ ಭಕುತರ ಕಟಕದೊಳಿರಿಸೆನ್ನ1

ಇಳಿರಥ ನಗಶರಸೋಮಮೌಳಿ|ನಳನಂದಿನಿಪ ಸುತ ರಾಮ ನಾಮಾ |ನಲಿದು ಪಾಡುವ ಗುಣಧಾಮ ರೌಪ್ಯಾ |ಬಲಾವಾಸಾನಂಗ ವಿರಾಮಾ ||ಆಹಾ||ಹಲವರಾಶ್ರಯಿಸಿ ನಾ ಬಲು ನೊಂದೆನೋರ್ವರು ಕಾಯ್ವ |ಸುಳಿವು ಕಾಣೆನೋ ಹೇ ಗರಳಕಂಠ ಪೊರೆಯೆನ್ನ 2

ಪಂಚ ಸುಸ್ಮಿತ ಯುಕ್ತ ವದನಾ ನಿಷ್ಪ್ರ |ಪಂಚ ಗಜಾಸುರ ಹನನಾ ಏಕಪಂಚಾಸ್ಯ ಜನಕ ಕೇಶವನಾ ಪ್ರೀತಿ |ಮಂಚ ನೀನಾಹೆ ಖಳರನಾ ||ಆಹಾ||ಹಿಂಚಾಗಿ ಅಳಿವಂಥ ಹಂಚಿಕೆಯಲಿವರ|ಮುಂಚೆ ಕರೆದು ಕೊಟ್ಟು ವಂಚಿಪೆ ಅತ್ರಿಜ 3

ಅಹಂಕಾರಾಧೀಶ ನಭೇಶತಾತ|ಮಹಾ ಮುನಿ ವಂದ್ಯಾಮರಾಸ್ಯ ಚಂದ್ರ |ದಿನಪತೇಕ್ಷಣನೆ ಅಶೇಷಾಮೋದ|ಬಹುಮೋದಸಕ್ತಾಯನ್ನಾಶಾ ||ಆಹಾ||ದಹಿಸೊಜಠರಪೋಷ ವಹಿಸಿ ಬೆಂಡಾದೆನೊ |ಅಹಿಮಲಾಂಧಕಾಸುರ ಗುಹಹ ಅಶ್ವತ್ಥಾಮ 4

ಶಕ್ರಾವರಜ ಶ್ರೀ ಪ್ರಾಣೇಶ ವಿಠ್ಠಲ |ನಕ್ರಾಹನಂಘ್ರಿಯನಿಶದಲ್ಲಿ |ವಕ್ರವಿಲ್ಲದೆ ಸೇವಿಪೀಶ ಹೇ ತ್ರಿ- |ವಿಕ್ರಮಕರವ್ಯೋಮಕೇಶ||ಆಹಾ||ಶುಕ್ರಪೂಜಿತಪಾದಅಕ್ರೂರಯನ್ನೊಳಿ |ದ್ದ ಕ್ರಮವೆಣಿಸದೆ ಸುಕೃತವೊದಗಿಸೊ5
*******