Showing posts with label ಶ್ರೀರಘುಕಾಂತ ತೀರ್ಥರ ದಿವ್ಯ varadesha vittala raghukanta teertha stutih. Show all posts
Showing posts with label ಶ್ರೀರಘುಕಾಂತ ತೀರ್ಥರ ದಿವ್ಯ varadesha vittala raghukanta teertha stutih. Show all posts

Sunday, 1 August 2021

ಶ್ರೀರಘುಕಾಂತ ತೀರ್ಥರ ದಿವ್ಯ ankita varadesha vittala raghukanta teertha stutih

 ..

kruti by ವರದೇಶ ವಿಠಲರು varadesha vittala dasaru

ರಘುಕಾಂತ ತೀರ್ಥರ ಸ್ತೋತ್ರ


ಶ್ರೀ ರಘುಕಾಂತ ತೀರ್ಥರ ದಿವ್ಯ

ಪದಕಂಜಸಾರಿಭಜಿಪ ಭಕ್ತರ

ಘೋರ ಬಡಿಸುತಿಪ್ಪ ಘಾವಳಿಗನೆಲ್ಲ

ದೂರವೋಡಿಸುವ ಶಕ್ತ ವಿರಕ್ತ ಪ


ದಿನಕರ ಕುಲಜಾತ ವನಜಾರಾಧ್ಯಸು -

ಮನಸವ್ರಾತ ಸನ್ನುತ

ಇನಕೋಟಿಪ್ರಭೆಗಾತ್ರ ಮನಸಿಜ ಪಿತಸ -

ನ್ಮುನಿಗಣನುತ ರಾಮಚಂದ್ರ ಪಾದಭೃಂಗ 1


ಯತಿಕುಲ ರತುನ ಭಕುತಸುರತರುವೆ ಸ -

ದ್ಗತಿ ದಾತಾ ಜಿತಮದನ

ಪತಿತಪಾವನ ಮುನಿ ಯತಿ ರಘುದಾಂತತೀ

ರಥ ಕರಸನ್ನುತ ಪಾದ ಪಂಕೇಜ 2


ಕಾಮಿತಫಲದ ನಿಸ್ಸೀಮ ಮಹಿಮ ಭಕ್ತ

ಪ್ರೇಮ ಪಾವನ ಚರಿತ

ಸಾಮಜವರದ ಶ್ರೀ ವರದೇಶವಿಠಲನ

ಪ್ರೇಮ ಪಾತ್ರ ಮಹಾ ಮಹಿಮ ನಿಷ್ಕಾಮ3

***