Showing posts with label ಶ್ರೀಶಾ ಹೃಷಿಕೇಶ ಕೇಶವ ವಸುಧಾಧೀಶ lakshmikanta. Show all posts
Showing posts with label ಶ್ರೀಶಾ ಹೃಷಿಕೇಶ ಕೇಶವ ವಸುಧಾಧೀಶ lakshmikanta. Show all posts

Sunday, 1 August 2021

ಶ್ರೀಶಾ ಹೃಷಿಕೇಶ ಕೇಶವ ವಸುಧಾಧೀಶ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಶ್ರೀಶಾ ಹೃಷಿಕೇಶ ಕೇಶವ ವಸುಧಾಧೀಶ ಪ


ಶ್ರೀಶಾ ಹೃಷಿಕೇಶ ಸರಸೀರುಹ ಭವ ಸನ್ನುತ

ಶೇಷಾಚಲ ಸನ್ನಿವಾಸ ಶಾಶ್ವತಾ ಪರಿಪಾಹಿ ಹರೇ ಅ.ಪ.


ದುರಿತ ವಿಭಂಜನ ವಾಮನ ವರ ಸಂಕರ್ಷಣ ಧರಣೀ-

ಧರ ಶ್ರೀಧರ ದೋಷದೂರ ಪರತರ ಪರಮೇಶ

ಪುರುಷೋತ್ತಮ ಅಮಿತ ಸಮ ನರನಾರಾಯಣ ಸುರಗಣ

ಪರಿಪಾಲ ಗಾನಲೋಲ ವರದ ಸುಖಾಸ್ಪದ ವಿಜಯದ 1


ನರಹರಿ ಮಾಧವ ಮುರಹರ ಶರಣಾಗತ ಜನರಕ್ಷಕ

ವರದಾಯಕ ಭವ ಮೋಚಕ ನಿರುಪಮ ಗುಣಭರಿತ

ಅರುಣಾಂಭೋರುಹಲೋಚನ ಸುರಗಂಗೋದಿತ ಚರಣ

ಕರಿರಾಜವರದಾಚ್ಯುತ ಸ್ವರತಾ ಸ್ವತಂತ್ರ ಸುಚರಿತ 2


ಜಯ ಜಯ ವೇದೋದ್ಧಾರಕ ಜಯ ಮಂದರ ಗಿರಿಧಾರಕ

ಜಯ ಕಾಂಚನನಯನಾಂತಕ ಜಯ ಮನುಜ ಮೃಗೇಂದ್ರ

ಜಯ ವೈರೋಚನಿ ದರ್ಪಹರ ಜಯ ಭೂಮಿ ಭುಜದಲ್ಲಣ

ಜಯರಾಮ ಕೃಷ್ಣ ನಿಪುಣ ಕಲ್ಕಿ ಹಾ ಶ್ರೀಕಾಂತ ಜಯಜಯ 3

***