Showing posts with label ನೋಡಬಾರದೆ ಕೃಷ್ಣಾ ಕರುಣದಿ prasannavenkata. Show all posts
Showing posts with label ನೋಡಬಾರದೆ ಕೃಷ್ಣಾ ಕರುಣದಿ prasannavenkata. Show all posts

Wednesday, 13 November 2019

ನೋಡಬಾರದೆ ಕೃಷ್ಣಾ ಕರುಣದಿ ankita prasannavenkata

by ಪ್ರಸನ್ನವೆಂಕಟದಾಸರು
ನೋಡಬಾರದೆ ಕೃಷ್ಣಾ ಕರುಣದಿನೋಡಬಾರದೆ ಕೃಷ್ಣಹಾಡಿ ಹರಸಿ ನಿನ್ನನೆ ಹೊಗಳುವಪರಿಮಾಡಬಾರದೆ ಹರಿಯೆ ಪ.

ಹಾನಿ ಹಿತಗಳನರಿಯೆ ಸುಜ್ಞಾನ ಭಕುತಿಗಳರಿಯೆದೀನ ದೇಶಿಗನುದ್ಧರಿಸೆಲೆ ದೇವಸಾನುರಾಗದಿ ದೇವ 1

ಏಸುಜನ್ಮದಿ ಬಂದೆ ನಾಘಾಸಿಯಾದೆನೊ ತಂದೆದಾಸರೊಳು ಆವಕಾಲಭಿಲಾಷೆಯುಳ್ಳ ಶ್ರೀಲೋಲ 2

ಏನು ಹೇಳಲಿ ಮನವು ನಿನ್ನಧ್ಯಾನಕೊದಗದು ಕ್ಷಣವುತಾನೆ ಹರಿದಡೆ ಕೇಡು ಅದರಿಂದಪ್ರಾಣನಾಥ ಮುಕುಂದ 3

ಕುಂಬಳವು ಕೈಗತ್ತಿ ಕರಾಂಬುಜಕೆ ನಿನಗಿತ್ತೆನಂಬಿದವಗಿನ್ನೇನಾರೆ ಮಾಡಯ್ಯಅಂಬುಜಜ ಸ್ಮರರಯ್ಯ 4

ಕಿಂಕರೌಘದೊಳಿಡೊ ನಿಶ್ಶಂಕನೆ ದಯಮಾಡೊಪಂಕಜಾಕ್ಷ ಮುರಾರಿ ಪ್ರಸನ್ನವೆಂಕಟಾದ್ರಿಪಾವನ್ನ5
*******