Showing posts with label ಪರಮ ಕರುಣಾಕರನೆ ಕರಪಿಡಿದು ಸಲಹೆನ್ನ gopalakrishna vittala. Show all posts
Showing posts with label ಪರಮ ಕರುಣಾಕರನೆ ಕರಪಿಡಿದು ಸಲಹೆನ್ನ gopalakrishna vittala. Show all posts

Monday, 2 August 2021

ಪರಮ ಕರುಣಾಕರನೆ ಕರಪಿಡಿದು ಸಲಹೆನ್ನ ankita gopalakrishna vittala

ಪರಮ ಕರುಣಾಕರನೆ ಕರಪಿಡಿದು ಸಲಹೆನ್ನ

ವರ ತಂದೆ ಮುದ್ದುಮೋಹನರೊಡೆಯನೆ ಪ.


ಸಿರಿಯರಸ ಶ್ರೀ ಶ್ರೀನಿವಾಸ ಶ್ರೀ ಕೃಷ್ಣಹರೆ

ಪರಮದಯಾಳು ದೇವ | ದೇವಅ.ಪ.


ನಿರುತ ನೀ ಸ್ವಪ್ನದಲ್ಲಿ ಪರಿಪರಿಯ ರೂಪದಲಿ

ತ್ವರಿತದಲಿ ತೋರಿ ಕಾಯ್ದೆ

ಪರಮಪಾವನಮೂರ್ತಿ ಗುರು ಅಂತರ್ಯಾಮಿಯೆ

ಕರಕರೆಯ ಬಿಡಿಸಿ ಸಲಹೊ | ದೇವ 1

ವಿಶ್ವತೈಜಸ ಪ್ರಾಜ್ಞ ತುರಿಯ ರೂಪಗಳಿಂದ

ನೀ ಸ್ವಪ್ನಗಳನೆ ತೋರ್ವೆ

ವಿಶ್ವೇಶ ಎನ್ನೊಳಗೆ ಸಾಕ್ಷಿಯಾಗಿರುತ್ತಿರ್ದು

ವಿಶ್ವಮಯ ಚೇಷ್ಟೆ ಮಾಳ್ಪೆ | ದೇವ 2

ಈ ಶರೀರದೊಳಗೆ ಶ್ರೀ ತೈಜಸನೆ ನೀನು

ವಾಸವಾಗಿರುತಲಿರ್ದು

ನಾಶರಹಿತನೆ ಮೋಹಪಾಶದಲಿ ಸಿಲುಕಿಸಿ

ಮೋಸಪಡಿಸುವರೆ ಎನ್ನ | ದೇವ 3

ಬಿಡಿಸೊ ದುರ್ವಿಷಯಗಳ ತಡವಾಕೊ ಹರಿ ಇನ್ನು

ಒಡಲಿಗೊಡೆಯನೆ ಶ್ರೀಹರಿ

ಕೊಡು ನಿನ್ನ ಪದಸೇವೆ ನುಡಿಸು ನಿನ್ನಯ ನಾಮ

ಪಡಿಸು ಸುಖ ಅನವರತದಿ | ದೇವ 4

ಸ್ವಪ್ನ ವ್ಯಾಪಾರದಲಿ ಅಪ್ರತಿಮಮಹಿಮೆಗಳ

ಕ್ಷಿಪ್ರದಿಂದಲಿ ತೋರಿದೆ

ಸಪ್ತಫಣಿಮಂಡಿತನೆ ಒಪ್ಪದಿಂದಲಿ ಎನ್ನ

ತಪ್ಪನೆಣಿಸದಲೆ ಕಾಯೋ | ದೇವ 5

ನೀತ ಗುರುಗಳ ದ್ವಾರ ಪ್ರೀತನಾದ ಹರಿಯೆ

ಪಾತಕವÀ ಕಳದೆ ಸ್ವಾಮಿ

ವಾತಜನಕನೆÀ ನಿನ್ನ ಖ್ಯಾತಿ ಪೊಗಳಲು ಅಳವೆ

ಪ್ರೀತನಾಗಿದ್ದು ಸಲಹೊ | ದೇವ 6

ಶ್ರೀಪತಿಯೆ ಪರಮಪಾವನಮೂರ್ತಿ ವಿಖ್ಯಾತ

ನೀ ಪ್ರೀತಿಲೀಲೆ ತೋರ್ದೆ

ಕಾಪಾಡಿದೆಯೊ ಎನ್ನ ಶ್ರೀ ಗುರುಗಳೊಳಗಿರ್ದು

ಗೋಪಾಲಕೃಷ್ಣವಿಠ್ಠಲ ದೇವ 7

****