ವಸುಧೆಯೊಳಗೆಣೆಗಾಣೆನೋ ಈ ಗುರುಗಳಿಗೆ
ಅಸುಪತಿ ಸಮದಿಂದ್ಯೆಶಸುವ ಕುಶಲರಿಗೆ || ಪ ||
ಶ್ರೀರಮಣನ ಪಾದಸಾರಸಮಧುಪ
ಸೂರಿಜನ ವಿನುತ ಶ್ರೀರಾಘವೇಂದ್ರರಿಗೆ || ೧ ||
ಬಂದ ಜನರಿಗಾನಂದಗರೆವ
ಕುಂದುರಹಿತ ಕಾಮನಂದಿಗಳೊಡೆಯರಿಗೆ || ೨ ||
ದಿಟ್ಟ ವೆಂಕಟೇಶ ವಿಠ್ಠಲನ ಪಾದವ
ಮುಟ್ಟಿ ಭಜಿಪರೊಳು ಶ್ರೇಷ್ಠರೆನಿಸುವರಿಗೆ || ೩ ||
******
ಅಸುಪತಿ ಸಮದಿಂದ್ಯೆಶಸುವ ಕುಶಲರಿಗೆ || ಪ ||
ಶ್ರೀರಮಣನ ಪಾದಸಾರಸಮಧುಪ
ಸೂರಿಜನ ವಿನುತ ಶ್ರೀರಾಘವೇಂದ್ರರಿಗೆ || ೧ ||
ಬಂದ ಜನರಿಗಾನಂದಗರೆವ
ಕುಂದುರಹಿತ ಕಾಮನಂದಿಗಳೊಡೆಯರಿಗೆ || ೨ ||
ದಿಟ್ಟ ವೆಂಕಟೇಶ ವಿಠ್ಠಲನ ಪಾದವ
ಮುಟ್ಟಿ ಭಜಿಪರೊಳು ಶ್ರೇಷ್ಠರೆನಿಸುವರಿಗೆ || ೩ ||
******