ಶ್ರೀ ಪ್ರಸನ್ನ ವೆಂಕಟದಾಸರ ಕೃತಿ
ರಾಗ ಸಿಂಧುಭೈರವಿ ಖಂಡಛಾಪುತಾಳ
ಸತತ ಕಲ್ಯಾಣ ಅಚ್ಯುತ ಭಟರಿಗೆ ॥ ಪ ॥
ರತಿಪತಿಪಿತನಂಘ್ರಿರತ ಮಹಾತ್ಮರಿಗೆ ॥ ಅ ಪ ॥
ಆಧಿ ವ್ಯಾಧಿಗಳಿಲ್ಲ ಅಶುಭವಾರ್ತೆಗಳಿಲ್ಲ ।
ಕ್ರೋಧ ನೃಪಭಯವಿಲ್ಲ ಕಾಕುಮತಿ ಇಲ್ಲ ॥
ಖೇದ ಮನಕಿಲ್ಲ ಖಿನ್ನತೆಯು ಮುಖಕಿಲ್ಲ ।
ಶ್ರೀಧವನ ನವ ಭಕುತಿಶೀಲ ಜೀವರಿಗೆ ॥ 1 ॥
ಅರಿಗಳೆ ಸಖರಕ್ಕು ಅತಿವಿಷ ಅಮೃತವಕ್ಕು ।
ಉರಗ ಪೂಮಾಲೆಯಕ್ಕು ಉರಿ ತಣ್ಣಗಕ್ಕು ॥
ಶರಧಿ ಗೋಷ್ಪದವಕ್ಕು ಶರಘಾತ ಬೆಂಡಕ್ಕು ।
ನರಹರಿಯ ನಾಮವನು ನಂಬಿ ತುತಿಪರಿಗೆ ॥ 2 ॥
ಪಾಪ ತಾಪಗಳ್ಗೋಟ ಪರಿದುಬಹ ಎಡರ್ಗೋಟ ।
ಆಪತ್ತುಗಳಿಗೋಟ ಆಲಸ್ಯಕೋಟ ॥
ಕೋಪ ದಾರಿದ್ರ್ರ್ಯಕೋಟ ಕಲಿವ್ಯಸನ ಮದಕೋಟ ।
ಶ್ರೀಪ್ರಸನ್ವೆಂಕಟನ ಭಜಿಪ ಭಕ್ತರಿಗೆ ॥ 3 ॥
**********
by ಪ್ರಸನ್ನವೆಂಕಟದಾಸರು
ಸತತ ಕಲ್ಯಾಣ ಅಚ್ಯುತ ಭಟರಿಗೆ ರತಿಪತಿಪಿತನಂಘ್ರಿರತ ಮಹಾತ್ಮರಿಗೆ ಪ.
ಆಧಿ ವ್ಯಾಧಿಗಳಿಲ್ಲ ಅಶುಭವಾರ್ತೆಗಳಿಲ್ಲಕ್ರೋಧ ನೃಪಭಯವಿಲ್ಲ ಕಾಕುಮತಿ ಇಲ್ಲಖೇದಮನಕಿಲ್ಲ ಖಿನ್ನತೆಯು ಮುಖಕಿಲ್ಲಶ್ರೀಧವನ ನವ ಭಕುತಿಶೀಲ ಜೀವರಿಗೆ 1
ಅರಿಗಳೆ ಸಖರಕ್ಕು ಅತಿವಿಷ ಅಮೃತವಕ್ಕುಉರಗಪೂಮಾಲೆಯಕ್ಕು ಉರಿ ತಣ್ಣಗಕ್ಕುಶರಧಿಗೋಷ್ಪದವಕ್ಕು ಶರಘಾತ ಬೆಂಡಕ್ಕುನರಹರಿಯ ನಾಮವನು ನಂಬಿ ತುತಿಪರಿಗೆ 2
ಪಾಪ ತಾಪಗಳ್ಗೋಟ ಪರಿದುಬಹ ಎಡರ್ಗೋಟಆಪತ್ತುಗಳಿಗೋಟ ಆಲಸ್ಯಕೋಟಕೋಪದಾರಿದ್ರ್ರ್ಯಕೋಟ ಕಲಿವ್ಯಸನ ಮದಕೋಟಶ್ರೀ ಪ್ರಸನ್ವೆಂಕಟನ ಭಜಿಪ ಭಕ್ತರಿಗೆ 3
*******