Showing posts with label ಏನ ಪೇಳಲಿ ನಾನು ಕೃಷ್ಣನ ಮಹಿಮೆ purandara vittala. Show all posts

Friday, 12 March 2021

ಏನ ಪೇಳಲಿ ನಾನು ಕೃಷ್ಣನ ಮಹಿಮೆ purandara vittala

ಏನ ಪೇಳಲಿ ನಾನು ಕೃಷ್ಣನ 

ಮಹಿಮೆ, ಯಾರಿಗೂ ತಿಳಿಯದಮ್ಮ ll ಪ ll

ಹೊತ್ತಾರೆದ್ದು ಯಶೋದೆ ಮುತ್ತು ಪೋಣಿಸುತ್ತಿದ್ದಳು, 

ಹತ್ತಿರಿದ್ದ ಕೃಷ್ಣ ಬಂದು ಒಂದು ಮುತ್ತು ತೆಗೆದುಕೊಂಡು 

ಸುತ್ತಲಿದ್ದ ಹುಡುಗರ ಸಹಿತ ಹಿತ್ತಲೊಳಗೆ ಬಿತ್ತಿ ಹೋದ ll ಅ ಪ ll

ಪರಿಪರಿ ಚಿಂತೆಯಿಂದ ಯಶೋದೆ ಗೋಪ್ಯರ ಕಳುಹಿದಳು, 

ಸಂದು ಸಂದಲ್ಲಿ ಹುಡುಕಿ ಹುಡುಕಿ ಕಂದ ಕಾಣನೆಂದು ಬರಲು, 

ಒಂದು ಕ್ಷಣದಲ್ಲಿ ಕೃಷ್ಣ ಬಂದು ಎದುರಾಗಿ ನಿಂದ ಕಂದ ll 1 ll

ಕಂದಯ್ಯನ ಕರವ ಪಿಡಿದು, ಯಶೋದೆ ಕರೆ ತಂದಳು ಮನೆಗೆ, 

ಕಂದ ಬಹಳ ಹಸಿದನೆಂದು ತುತ್ತು ಮಾಡಿ ಉಣಿಸಿದಳು, 

ಕಂದ ಮುತ್ತು ತೋರಿಸು ಚಂದಿರ ನೀನೆಂದು ಮುದ್ದಿಸಿದಳು ll 2 ll

ತಾಯ ಕರೆದು ಹಿತ್ತಲೊಳಗೆ ಮುತ್ತಿನ ಗಿಡವ ತೋರಿಸಿದ 

ಪಂಟೆ ಪಂಟೆಗೆ ಎಂಟು ಎಂಟು ಗೊಂಚು ಗೊಂಚು ಜೋಲುತಿರಲು, 

ಕಡಿದು ಕಡಿದು ರಾಶಿ ಹಾಕಿದ ಪರಮ ಪುರಂದರ ವಿಠಲರಾಯ ll 3 ll

***