Showing posts with label ನೋಡಿರಯ್ಯ ನೀವು ನೋಡಿರಯ್ಯ ನೋಡಿರಯ್ಯ ಹರಿದಾಸರ purandara vittala. Show all posts
Showing posts with label ನೋಡಿರಯ್ಯ ನೀವು ನೋಡಿರಯ್ಯ ನೋಡಿರಯ್ಯ ಹರಿದಾಸರ purandara vittala. Show all posts

Saturday, 7 December 2019

ನೋಡಿರಯ್ಯ ನೀವು ನೋಡಿರಯ್ಯ ನೋಡಿರಯ್ಯ ಹರಿದಾಸರ purandara vittala

ರಾಗ ನಾದನಾಮಕ್ರಿಯೆ ಆದಿತಾಳ

ನೋಡಿರಯ್ಯ ನೀವು ನೋಡಿರಯ್ಯ ||ಪ||
ನೋಡಿರಯ್ಯ ಹರಿದಾಸರ ಮಾಯವ , ಜೋಡಾಗಿಪ್ಪ ಎರಡು ಪಕ್ಷಿ
ಗೂಡನಗಲಿ ಗೂಡ ತೊರೆದು
ಆಡುತ ಬಂದು ನುಂಗಿ ನೋಡುವ ಸೊಗಸು ||ಅ||

ಮನೆಯ ಒಳಗೆ ಒಂದು ತಗಣೆ ಮಾಳಿಗೆ ನುಂಗಿತು , ಮಂಚವ ನುಂಗಿತು
ಮಲಗಿದ್ದ ಸತಿಪತಿಯ ನುಂಗಿತು , ಮನೆಗೆ ಬಂದ ಬಳಗವ ನುಂಗಿತು
ಬಿಡದೆ ನುಂಗಿತು ಮನೆಮಕ್ಕಳನು
ಅದು ಸಾಲದೆಂದು ತಗಣೆಯ ಮರಿಯು , ಆಡುತ ಬಂದು ನುಂಗಿ ನೋಡುವ ಸೊಗಸ ||

ಹುತ್ತದೊಳಗೆ ಒಂದು ಸರ್ಪ , ಎಂಟು ಗಜಗಳ ಬಿಡದೆ ನುಂಗಿತು
ಎಂಟು ನೆಂಟರ ನುಂಗಿತು , ಮತ್ತೆ ರವಿಚಂದ್ರರ ನುಂಗಿತು
ಅಂಥಾ ಸರ್ಪನ ಕಪ್ಪೆಯು ನುಂಗಿತು
ಅಂಥಾದೊಂದು ಕಪ್ಪೆಯ ಮರಿಯಾಡುತ ಬಂದು , ನುಂಗಿ ನೋಡುವ ಸೊಗಸ ||

ಮೂರು ನುಂಗಿತು, ಮೂರಾರನೆ ನುಂಗಿತು
ಮೂರು ಮೂರ್ತಿಗಳ ಬಿಡದೆ ನುಂಗಿತು , ಸಾಗರಸಪ್ತದ್ವೀಪವ ನುಂಗಿತು
ವರಗುರು ಪಂಚಾಕ್ಷರಗಳ ನುಂಗಿತು
ಶರಣಾಗತ ಶ್ರೀಪುರಂದರವಿಠಲ ತಾನೆ ಒಬ್ಬನೆ ಬಲ್ಲ ||
********