ಸುಶಿಲೇಂದ್ರತೀರ್ಥರ ವೈಭವವನು ನೋಡ ಬನ್ನಿರೆ ಜನರು
ಹೊಸರಿತ್ತಿ ಧೀರೇಂದ್ರರ ಬಳಿಯಲಿ ಹಸನಾಗಿರುವವರು ಪ.
ವರದಾ ತೀರದಿ ನೆಲಸುತ ಹರುಷದಿ
ವರಗಳ ಕೊಡುತಿಹರು
ಪರಿಪರಿಯಿಂದಲಿ ಸೇವಿಪ ಭ-
ಕ್ತರ ಕರುಣದಿ ಪೊರೆಯುವರು 1
ವೃಂದಾವನದಲಿ ದ್ವಾದಶ ವರ್ಷಗ
ಳಿಂದಲಿ ನಿಂದಿಹರು
ಕುಂದದೆ ಶ್ರೀ ರಾಘವೇಂದ್ರರ ದಯವನು
ಚಂದದಿ ಪಡೆದಿಹರು 2
ಕುಷ್ಟಾದಿಗಳನು ದುಷ್ಟ ಗ್ರಹಗಳ
ಥಟ್ಟನೆ ತೊಲಗಿಪರು
ಇಷ್ಟ ಭಕ್ತರನು ಸಲಹುವ
ಗೋಪಾಲಕೃಷ್ಣವಿಠ್ಠಲ ಪ್ರಿಯರು 3
****