ankita ತಂದೆವೆಂಕಟೇಶವಿಠಲ
ರಾಗ: ಕಾನಡ ತಾಳ: ತ್ರಿಶ್ರತ್ರಿಪುಡೆ
ಬಾರೊ ಸದ್ಗುಣಸಾರಶರನಿಧೆ ಬಾರೋ ಕರುಣಾಂಭೋನಿಧೆ ಪ
ಬಾರೋ ತುಂಗಾತೀರ ನವಮಂತ್ರಾಲಯಪ್ರಭೋ ಸಾರಿದೇ ಅ.ಪ
ರಾಘವೇಂದ್ರ ಬುಧೌಘವಂದ್ಯ ವಿರಾಗ ನೃಪದುರಿತೌಘಹ
ಯೋಗವಿದ ಭವರೋಗಹರ ವಿನುತಾಗಮಾಲಯಸ್ಥಿತ ಮಹ
ತ್ಯಾಗಶೀಲ ಸದ್ರಾಗಭಾಷ ಸಮಾಗತ ಸುರಘೂದ್ವಹ
ಭಾಗವತಭಕ್ತಾಗ್ರಣಿ ದ್ವೈತಾಗಮಾದ್ಭುತ ವಿಗ್ರಹಾ 1
ದಾಸ ತತ್ತ್ವ ದಿಗ್ದೇಶ ಪ್ರಚುರಣಖೇಶ ವಿಶ್ವೋಪಾಸಕ
ಶ್ರೀಶಪಾದಕುಶೇಶಯಾಶ್ರಿತ ಭೂಸುರವ್ರಜಪೋಷಕ
ವ್ಯಾಸರಾಜ ಲಂಕೇಶನನುಜ ಮಹೀಶ ಕಶ್ಯಪಸುತಮುಖ
ಕ್ಲೇಶಹರ ಕರುಣಾಸಮುದ್ರ ವಿಲಾಸರೂಪ ವಿಧಾರಕಾ 2
ತಂತ್ರದೀಪಿಕ ಗ್ರಂಥಕರ್ತುಕಾನಂತ ಮಹಿಮಾಪೂರಿತಾ
ಮಂತ್ರಸದ್ಮ ನಿರಂತ್ರವಾಸ ಶ್ರೀತಂದೆವೆಂಕಟೇಶವಿಠಲ ತಾ
ನಿಂತು ತವಹೃದ್ಯಂತರದಿ ನವಯಂತ್ರವಾಹಕನಾಗುತಾ
ಚಿಂತಿತಾರ್ಥ ಗತ್ಯಂತ್ರವಿಲ್ಲೆನೆ ಮಂತ್ರಿಸುವ ತಾ ನಡೆಸುತಾ 3
***
ವಿರಾಗ=ರಾಗರಹಿತ; ಯೊಗವಿದ=ಯೋಗವನ್ನು ತಿಳಿದವ;
ವಿನುತಾಗಮಾಲಯ ಸ್ಥಿತ=ಮಂತ್ರಾಲಯದಲ್ಲಿರುವ;
ಸುರಘೂದ್ವಹ =ರಘುವಂಶದ ಶ್ರೀರಾಮ; ಖೇಶ=ಸೂರ್ಯ;
ಕುಶೇಶಯ=ಕಮಲ;