ನೀರಜಾಕ್ಷನ ಪಾದ ಚಾರು ಕಲ್ಪತರು ಸೇರಿಸುಖಿಸುವ ನಮ್ಮ ರಾಯ ಪರಾಕು ಪ.
ವೇದ ತಂದಾತನ ಪಾದವ ಕಂಡು ಬಂದೆಮೋದವಾದನು ಸಹದೇವ ಪರಾಕು 1
ರುಕ್ಮಿಣಿ ಅರಸಗೆ ಸಕಲವು ಅರಿವಿದೆಭಕುತರ ತೋರೆಂದು ನಕುಲ ಪರಾಕು 2
ಕೀರ್ತಿವಂತÀನ ದಿವ್ಯ ಮೂರ್ತಿಯ ಕಂಡು ಬಂದೆಪ್ರೀತಿ ಮಾಡಿದ ನಮಗೆ ಪಾರ್ಥ ಪರಾಕು3
ಶಾಮ ವರ್ಣನ ಪಾದ ಕಾಮಿಸಿ ಕಂಡುಬಂದೆಪ್ರೇಮ ಮಾಡಿದನಮಗೆ ಭೀಮ ಪರಾಕು4
ರಮ್ಮಿಯರಸನ ಪಾದ ಜುಮ್ಮನೆ ಕಂಡು ಬಂದೆನಿಮ್ಮ ಧ್ಯಾನದಲೆ ಇರುವ ಧರ್ಮ ಪರಾಕು 5
***