Showing posts with label ಆರಹಾರೈಸಿದರೇನುಂಟು ಬರೆ ನೀರ ಕಡೆದರಲ್ಲೇನುಂಟು purandara vittala. Show all posts
Showing posts with label ಆರಹಾರೈಸಿದರೇನುಂಟು ಬರೆ ನೀರ ಕಡೆದರಲ್ಲೇನುಂಟು purandara vittala. Show all posts

Tuesday, 3 December 2019

ಆರಹಾರೈಸಿದರೇನುಂಟು ಬರೆ ನೀರ ಕಡೆದರಲ್ಲೇನುಂಟು purandara vittala

ರಾಗ ಮಧ್ಯಮಾವತಿ. ಆದಿ ತಾಳ

ಆರ ಹಾರೈಸಿದರೇನುಂಟು, ಬರೆ
ನೀರ ಕಡೆದರಲ್ಲೇನುಂಟು

ಅಂತರವರಿಯದ ಅಧಮನ ಬಾಗಿಲ
ನಿಂತು ಕಾಯ್ದರಲ್ಲೇನುಂಟು
ಇಂತೆರದಲ್ಲಿಯು ಬಳಲಿಸಿ ತಾ ಯಮ-
ನಂತೆ ಕೊಲುವನಲ್ಲೇನುಂಟು

ಕೊಟ್ಟುದ ಕೊಂಡುದ ಹೇಳನ ಮಾಡೋ ಕ-
ನಿಷ್ಠನ ಸೇರಿದರೇನುಂಟು
ಬಿಟ್ಟಿಯ ಮಾಡಿಸಿ ಬೆದರಿಸಿ ಬಿಡುವನ
ಪಟ್ಟಣ ಸೇರಿದರೇನುಂಟು

ಪಿಸುಣನ ಕುದುರೆಯ ಮುಂದೋಡಲು ಬರೆ
ಬಿಸಿಲ್ಹಣ್ಣಲ್ಲದಲೇನುಂಟು
ವಸುಧೆಯೊಳಗೆ ಸಿರಿ ಪುರಂದರ ವಿಠಲನೆಂ-
ದುಸಿರಲು ಮುಕುತಿಯ ಫಲವುಂಟು
***

pallavi

Ara hAraisidarEnuNTu bari nIra kaDedarallEnuNTu

caraNam 1

antara pariyada adhamana bAgila nintu kAidarallEnuNTu
idderadalliyu baLalisi tA yamanante koluvanallEnuNTu

caraNam 2

koTTada koNDuda hELala mADo kaniSThana sEridarEnuNTu
biTTeya mADisi bEdarisi biDuvana paTTaNa sEridarEnuNTu

caraNam 3

pisuNana kudureya mundODalu bari bisil-haNNalladalEnuNTu
vasudheyoLage siri purandara viTTalanendusiralu mukutiya balavuNTu
***

ಆರ ಹಾರೈಸಿದರೇನುಂಟು - 
ಉರಿನೀರ ಕಡೆದರಲ್ಲೇನುಂಟು ? ಪ.

ಅಂತರವರಿಯದ ಅಧಮನ ಬಾಗಿಲನಿಂತು ಕಾಯ್ದರಲ್ಲೇನುಂಟುಎಂತಾದರಲ್ಲಿಯ ತುಪ್ಪ ಸಾಧಿಸಿ ಯಮನಂತೆ ಕೊಲುವರಲ್ಲೇನುಂಟು ? 1

ಕೊಟ್ಟೆ - ಕೊಟ್ಟೆನೆಂದು ಕೊಡದುಪಚಾರದಭ್ರಷ್ಟನ ಸೇರಿದರೇನುಂಟುಬಿಟ್ಟೆಯ ಮಾಡಿಸಿ ಬೆದರಿಸಿ ಬಿಡುವ ಕನಿಷ್ಟನ ಸೇರಿದರೇನುಂಟು ? 2

ಪಿಸುಣನ ಕುದುರೆಯ ಮುಂದೋಡಲು ಬಲುಬಿಸಿಲಿನ ಹಣ್ಣಲ್ಲದೇನುಂಟುವಸುಧೆಯೊಳಗೆ ಪುರಂದರವಿಠಲನ ಭಜಿಸಲು ಮುಕ್ತಿಸಾಧನವುಂಟು 3
*******