Showing posts with label ಹರಿದಾಸರ ಸಂಗಕೆ ಸರಿಯುಂಟೆ ಗುರು ಕರುಣಕೆ ಇನ್ನು ಪಡಿಯುಂಟೆ ದೇವ shree krishna. Show all posts
Showing posts with label ಹರಿದಾಸರ ಸಂಗಕೆ ಸರಿಯುಂಟೆ ಗುರು ಕರುಣಕೆ ಇನ್ನು ಪಡಿಯುಂಟೆ ದೇವ shree krishna. Show all posts

Wednesday, 1 September 2021

ಹರಿದಾಸರ ಸಂಗಕೆ ಸರಿಯುಂಟೆ ಗುರು ಕರುಣಕೆ ಇನ್ನು ಪಡಿಯುಂಟೆ ದೇವ ankita shree krishna

..

ಹರಿದಾಸರ ಸಂಗಕೆ ಸರಿಯುಂಟೆ

ಗುರು ಕರುಣಕೆ ಇನ್ನು ಪಡಿಯುಂಟೆ ದೇವ ಪ


ದಾವಾನಲವ ತÀಪ್ಪಿಸಿ ಕಾಡಾನೆಯದÉೀವಗಂಗೆಗೆ ತಂದು ಹೊಗಿಸಿದಂತೆಆವರಿಸಿರುವ ಷಡ್ವರ್ಗ ತಪ್ಪಿಸಿ ಎನ್ನಶ್ರೀವರನ ಕರುಣಾರಸದಿ ತೋಯಿಸುವ 1


ಕಂದಿ ಬೇಸಗೆಯಲ್ಲಿ ನೊಂದ ಚಕೋರಕ್ಕೆಇಂದುಬಿಂಬದ ಮುಂದೆ ಹೊಗಿಸಿದಂತೆನೊಂದ ಹಮ್ಮಮತೆಯ ನೊಂದಿಸಿ ಎನ್ನ ಗೋ-ವಿಂದನ ಪಾದ ಸನ್ನಿಧಿಯ ಸೇರಿಸುವ 2


ಬಲೆಯ ಹಾರಿದ ಎಳೆ ಹುಲ್ಲೆಯ ಮರಿಗಳಿಗೆಒಲಮೆಯಿಂದಲಿ ತಾಯ ತೋರಿಸಿದಂತೆಬಲು ಇಂದ್ರಿಯಗಳ ಸೆರೆಯ ಬಿಡಿಸಿ ಎನ್ನನಳಿನನಾಭನ ಸನ್ನಿಧಿಯ ತೋರಿಸುವ 3


ಕರುಡರಿಗೆ ದಿವ್ಯಾಂಜನ ಹಚ್ಚಿ ಕಣ್ಣಿತ್ತುತೆರ ತೆರದಲಿ ಉಂಬ ನಿಧಿಯನಿತ್ತಂತೆಪರಮ ಮೂಢನಾದ ಎನಗೆ ಜ್ಞಾನವನಿತ್ತುನರಹರಿ ಪಾದ ಸಂದರುಶನವನ್ನೀವ 4


ತಡೆಯಿಲ್ಲದ ಪೂರಾ ತೊರೆಯಲ್ಲಿ ಪೋಪನಪಿಡಿದೆತ್ತಿ ತಡಿಯನು ಸೇರಿಸಿದಂತೆಕಡೆಗೆಟ್ಟು ಭವಾಬ್ಧಿ ನಡುವೆ ಸಿಕ್ಕಿದ ಎನ್ನಪಿಡಿದು ಶ್ರೀಕೃಷ್ಣನಂಘ್ರಿಗಳ ಸೇರಿಸುವ 5

***