Showing posts with label ಧನ್ಯನಾದೆ ಪಾವನ್ನ ಮೂರುತಿ ನಿನ್ನ ಕಂಡು mohana vittala. Show all posts
Showing posts with label ಧನ್ಯನಾದೆ ಪಾವನ್ನ ಮೂರುತಿ ನಿನ್ನ ಕಂಡು mohana vittala. Show all posts

Sunday, 28 March 2021

ಧನ್ಯನಾದೆ ಪಾವನ್ನ ಮೂರುತಿ ನಿನ್ನ ಕಂಡು ankita mohana vittala

 ರಾಗ - : ತಾಳ -


ಧನ್ಯನಾದೆ ಪಾವನ್ನ ಮೂರುತಿ ನಿನ್ನ ಕಂಡು ll ಪ ll


ಯೆನ್ನ ಜನ್ಮಜನ್ಮಾಂತರದ ಅಘ l

ಯಿನ್ನಿರದ ತೆರ ದೂರವಾದವು ll ಅ ಪ ll


ಯೇಸು ಜನುಮದ ಪುಣ್ಯ ಅರಿಯೆ l

ವಾಸುದೇವ ನೀ ಮೂಲ ರೂಪದಿ ll

ಈ ಸಮಯ ಕಣ್ಮುಂದೆ ಸುಳಿಯಲು l

ಹಸೆಗೆಟ್ಹೋಯಿತನಾದಿ ಕರ್ಮವು ll ೧ ll


ಜಗವನುದರದೊಳಿಟ್ಟು ಪ್ರಳಯದೆ l

ಮಗುವಿನಂತೆಲೆ ಮೇಲೆ ಮಲಗಿದೆ ll

ಈಗ ಈ ಪರಿ ಚಟುಲ ರೂಪದೆ l

ಮಿಗೆ ಹರುಷ ಒದಗಿಸಿದೆ ಶ್ರೀನಿಧೆ ll ೨ ll


ಕಂದನಾಟವ ಕಂಡು ಜನನಿ ಮಹ l

ನಂದದಲಿ ಬಂದಪ್ಪುವಂದದಿ ll

ಇಂದಿರೇಶ ಮೋಹನ್ನವಿಟ್ಠಲ ನೀನೀ l

ಮಂದಮತಿಗಾನಂದ ತಂದೆ ll ೩ ll

***